ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಮಹಿಳಾ ವಿಭಾಗದ ವತಿಯಿಂದ ಭಾನುವಾರ ಗುರುಪುರ ಕುಕ್ಕುದಕಟ್ಟೆಯಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ವೇದಮೂರ್ತಿ ಅರುಣ್ ಭಟ್ ಖಂಡಿಗೆ ಪೂಜೆ ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕ್ಷಿ ಪಿ. ಶೆಟ್ಟಿ ಗಂಜಿಮಠ, ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ, ಯುವ ವಿಭಾಗದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಮಾಜಿ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಸತ್ಯಾನಂದ ಶೆಟ್ಟಿ ಗುರುಪುರ, ಸುದರ್ಶನ ಶೆಟ್ಟಿ ಪೆರ್ಮಂಕಿ, ಹರೀಶ್ ಶೆಟ್ಟಿ ಉಪ್ಪುಗೂಡು, ಚಂದ್ರಹಾಸ ಶೆಟ್ಟಿ ನಾರಳ, ಪ್ರವೀಣ್ ಶೆಟ್ಟಿ ಗುಂಡ್ಯ, ಜಯರಾಮ ಶೆಟ್ಟಿ ಉಳಾಯಿಬೆಟ್ಟು, ಸಂಘದ ಪದಾಧಿಕಾರಿಗಳು, ಸದಸ್ಯರು, ಬಂಟ ಸಮಾಜ ಬಾಂಧವರು ಉಪಸ್ಥಿತರಿದ್ದರು.
