ಕಟೀಲು : ರಜತ ವರ್ಷದ ಸಂಭ್ರಮದಲ್ಲಿರುವ ಎಕ್ಕಾರು ವಿಜಯ ಯುವ ಸಂಗಮದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನುಮ ದಿನದ ಸವಿ ನೆನಪಿಗಾಗಿ ಎರಡನೆಯ ಮನೆಯ ಶಿಲಾನ್ಯಾಸ ವನ್ನು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್‌ಅವರು ನೆರವೇರಿಸಿದರು. ವಿಜಯ ಯುವ ಸಂಗಮದ ಸದಸ್ಯನಾಗಿದ್ದು ಅಕಾಲ ಮರಣಕ್ಕೀಡಾದ ತಾರನಾಥ. ಬಿ ಇವರ ಪತ್ನಿ ಹಾಗು ಇಬ್ಬರು ಎಳೆ ಮಕ್ಕಳ ಕುಟುಂಬಕ್ಕೆ ಮನೆಯ ನಿರ್ಮಾಣವಾಗಲಿದೆ.
ಈ ಸಂದರ್ಭ ಶ್ರೀಮತಿ ಕಸ್ತೂರಿ ಪಂಜ, ಈಶ್ವರ್ ಕಟೀಲು, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಸಂಗಮದ ಗೌರವ ಅಧ್ಯಕ್ಷ ರತ್ನಾಕರ ಶೆಟ್ಟಿ, ಕೇಶವ್ ಕಿನ್ನಿಗೋಳಿ, ಪ್ರಕಾಶ್ ಕುಕ್ಯಾನ್, ಸುದೀಪ್ ಅಮೀನ್, ಸಂಘದ ಅಧ್ಯಕ್ಷ ಆದರ್ಶ ಶೆಟ್ಟಿ ಉಪಸ್ಥಿತರಿದ್ದರು. ವಿಕ್ರಮ್ ಮಾಡ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ನಿರೂಪಿಸಿದರು.
