Published On: Tue, Oct 19th, 2021

ಸತೀಶ್ ಪೂಜಾರಿ ಆತ್ಮಹತ್ಯೆ

ಕೈಕಂಬ : ವಿವಾಹಿತ ವ್ಯಕ್ತಿಯೊಬ್ಬರು ಸೋಮವಾರ ಬೆಳಿಗ್ಗೆ ಗುರುಪುರ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೆಲವು ಸಮಯದವರೆಗೆ ಗಂಜಿಮಠ ಜಂಕ್ಷನ್‌ನಲ್ಲಿ ಫಾಸ್ಟ್ಫೂಡ್ ಗೂಡಂಗಡಿ ನಡೆಸುತ್ತಿದ್ದ, ಮಂಗಳೂರಿನಲ್ಲಿ ರಿಕ್ಷಾ ಚಾಲಕರಾಗಿದ್ದ ಸತೀಶ್ ಪೂಜಾರಿ(೩೨) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ.gur-oct-18-sathish poojary

ಕುಕ್ಕಟ್ಟೆಯ ಪತ್ನಿಯೊಂದಿಗೆ ಇವರು ಗಂಜಿಮಠ-ಮಳಲಿ ಕ್ರಾಸ್ ಬಳಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ಕೈಕಂಬದಿಂದ ಆಗಮಿಸಿದ ಸತೀಶ್ ಸೇತುವೆ ಮೇಲೆ ಆಕ್ಟಿವಾ ಸ್ಕೂಟರ್ ಇಟ್ಟು, ನೇರವಾಗಿ ನದಿಗೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಸಂಶಯಿಸಲಾಗಿದೆ. ಸ್ಥಳೀಯರ ಸಹಾಯದಿಂದ ಬಜ್ಪೆ ಪೊಲೀಸರು ಶವ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter