ಕುಪ್ಪೆಪದವು: ಕಜೆಪದವು ವಿಶ್ವ ಹಿಂದೂ ಪರಿಷತ್ ಬಜರಂಗದಳ, ಶ್ರೀ ಧರ್ಮಶಾಸ್ತ ಶಾಖೆಯ ವತಿಯಿಂದ ನವರಾತ್ರಿಯ ಸಂಧರ್ಭದಲ್ಲಿ ಶಾರ್ಧೂಲ ವೇಷ ಆಯೋಜಿಸಿ ಸಂಗ್ರಹವಾದ 40 ಸಾವಿರ ಮೊತ್ತವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೂಡುಪೆರಾರ ನಿವಾಸಿ ಗೋಪಾಲ ದೇವಾಡಿಗ ಇವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಅವರ ಮನೆಯಲ್ಲಿ ಹಸ್ತಾಂತರಿಸಲಾಯಿತು. ಕಜೆಪದವು ಭಜರಂಗದಳ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.

