ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಪ್ರತೀ ವರ್ಷವೂ ಶಬರಿಮಲೆಗೆ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು. ಈ ಬಾರಿಯೂ ಇವರಿಬ್ಬರು ತಮ್ಮ ತಂಡವನ್ನು ಕಟ್ಟಿಕೊಂಡು ಅಯ್ಯಪ್ಪನ ದರುಶನ ಪಡೆಯಲು ಶಬರಿಮಲೆಯತ್ತ ಫೆ. 15ರಂದು ಪ್ರಯಾಣಿಸಿದ್ದರು. ಶಬರಿಮಲೆ ಸ್ವಾಮಿಯ ದರ್ಶನ ಪಡೆದು ಸುತ್ತಮುತ್ತಲ ದೇವಾಲಯಗಳಿಗೆ ಭೇಟಿ ನೀಡಿದ ಶಿವಣ್ಣ ಮತ್ತವರ ತಂಡ ಬುಧವಾರದಂದು ಬೆಂಗಳೂರಿಗೆ ಮರಳಿದೆ.
ಈ ಬಾರಿ ಸ್ಯಾಂಡಲ್ವುಡ್ನ ಲವ್ಲಿ ಸ್ಟಾರ್ ಪ್ರೇಮ್ ತನ್ನ ಮಗಳ ಜೊತೆ ಈ ತಂಡವನ್ನು ಸೇರಿದ್ದರು. ಫೆ.16ರಂದು ಶಬರಿಮಲೆ ತಲುಪಿದ ತಂಡ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ತಂಡದ ಕೆಲವು ಸದಸ್ಯರು ಶಿವಣ್ಣ ಜೊತೆ ಸೇರಿ ಉರುಳು ಸೇವೆ ಮಾಡಿದರು. ಶಬರಿಮಲೆ ಯಾತ್ರೆ ನಮ್ಮ ಜೀವನದ ಅದ್ಭುತ ಕ್ಷಣಗಳಲ್ಲೊಂದು ಎಂದು ಬಣ್ಣಿಸುವ ಪುನೀತ್ ಪ್ರತೀ ವರ್ಷ ಈ ಯಾತ್ರೆಯನ್ನು ತಪ್ಪದೆ ಕೈಗೊಳ್ಳುವುದಾಗಿ ಹೇಳುತ್ತಾರೆ.
