ಕೈಕಂಬ: ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಶವ ಎಂ ಅಮೀನ್ ಕರ್ನಾಟಕ ಸರಕಾರದಿಂದ ನೀಡುವ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೀಡಿ ಗೌರವಿಸಿದ್ದಾರೆ. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪದಕ ಪ್ರಧಾನ ಕಾರ್ಯಕ್ರಮದಲ್ಲಿ , ಪ್ರಮುಖ ಅಗ್ನಿ ಶಾಮಕ ಎಂ. ಕೇಶವ್ ಪೂಜಾರಿ ಪೊಳಲಿ ಇವರು ಮುಖ್ಯಮಂತ್ರಿಗಳಿAದ ಚಿನ್ನದ ಪದಕ ಪಡೆದುಕೊಂಡರು.15vp keshavಅಗ್ನಿ ಶಾಮಕದಳ ತುರ್ತು ಸೇವ ಇಲಾಖೆಯಲ್ಲಿ ೧೯೯೭ ರಿಂದ ದಕ್ಷಿಣಕನ್ನಡದ ಅಗ್ನಿ ಶಾಮಕ ದಳದಲ್ಲಿ ಸೇವೆ ಸಲ್ಲಿಸಿದ ಅವರು ಇಲಾಖೆಯಲ್ಲಿ ನಾಗರಿಕರ ಪ್ರಾಣ ರಕ್ಷಣೆ ಹಾಗೂ ಅಸ್ತಿ ಸಂರಕ್ಷಣಾ ಕಾರ್ಯಚರಣೆಯಲ್ಲಿ ಮಂಗಳೂರಿನ ವಿಮಾನ ದುರಂತದಲ್ಲಿ ಮಂಗಳೂರಿನ ಜ್ಯೋತಿ ಸರ್ಕಲ್ ನ ಟ್ರೇಡ್ ಸೆಂಟರ್ ಬಿಲ್ಡಿಂಗ್ ನಲ್ಲಿ ಅಗ್ನಿ ದುರಂತದ ಸಂದರ್ಭ ಉತ್ತಮ ಸೇವೆಯನ್ನು ಗುರುತಿಸಿ ಮುಖ್ಯ ಮಂತ್ರಿಗಳ ಪದಕ ಪ್ರಧಾನಕ್ಕೆ ಅಯ್ಕೆಯಾಗಿದ್ದಾರೆ. ಇವರು ಮೂಲತಃ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಮಂಗಾಜೆ ದಿ.ಗಣಪ ಪೂಜಾರಿ ಹಾಗೂ ವೆಂಕಮ್ಮ ಪೂಜಾರ್ತಿ ಯವರ ಪುತ್ರ ಎಂ ಕೇಶವ ಅಮೀನ್ ಅವರು ಪಾಂಡೇಶ್ವರ, ಕದ್ರಿ, ಕೊಡಗು ಜಿಲ್ಲೆಯ ಕುಶಲ್ ನಗರದಲ್ಲಿ ಪ್ರಸ್ತುತ ಉಡುಪಿ ಠಾಣೆಯ ಪ್ರಮುಖರಾಗಿ ಅಗ್ನಿ ಶಾಮಕರಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *