ಕೈಕಂಬ : ಗುರುಪುರ ಕೈಕಂಬದ ಕಿನ್ನಿಕಂಬಳದಲ್ಲಿ ಬೆಥನಿ ಸಂಸ್ಥೆಯ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ 15 ರಂದು ಗುರುವಾರ ಬೆಥನಿ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಥನಿ ಸಂಸ್ಥೆಯ ಶತಮಾನ ಆರಂಭೋತ್ಸವ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ಮಾರಿ ಬೆಲ್ ಮಾತನಾಡಿ, ನಮ್ಮ ವಿದ್ಯಾ ಸಂಸ್ಥೆಯು ಪ್ರತಿವರ್ಷವೂ ಬೆಥನಿ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತ ಬಂದಿದೆ. ಈ ವರ್ಷ ಸಂಸ್ಥೆಗೆ ನೂರರ ಸಂಭ್ರಮ. ಕೊರೊನಾ ಮಹಾಮಾರಿಯಿಂದ ಕಾರ್ಯಕ್ರಮ ನಡೆಸುವ ಸ್ಥಿತಿ ಇಲ್ಲ ಎಂದರು.gur-july-15-bhethani-1ಫಾ. ರೇಮಂಡ್ ಮಸ್ಕರೇನಸ್ ಅವರಿಂದ ಸ್ಥಾಪಿಸಲ್ಪಟ್ಟಿರುವ ಬೆಥನಿ ಸಂಸ್ಥೆ ಹಾಗೂ ಬೆಥನಿ ವಿದ್ಯಾ ಸಂಸ್ಥೆಗಳಿಗೆ ಜು. ೧೬ಕ್ಕೆ ನೂರು ವರ್ಷವಾಗುತ್ತದೆ. ಈಗ ದೇಶವಿದೇಶಗಳಲ್ಲಿ ಬೆಥನಿ ವಿದ್ಯಾ ಸಂಸ್ಥೆ, ವೃದ್ಧಾಶ್ರಮ, ಅನಾಥಾಶ್ರಮ, ವೈದ್ಯಕೀಯ ಕೇಂದ್ರಗಳು ಕಾರ್ಯನಿರತವಾಗಿವೆ. ರೋಸಾ ಮಿಸ್ತಿಕಾ ಪ್ರೌಢ ಶಾಲೆ ಬೆಥನಿಯ ಅಂಗಸಂಸ್ಥೆ. ಸಂಸ್ಥೆಯ ಶತಮಾನೋತ್ಸವ ವರ್ಷಾಚರಣೆ ಅದ್ದೂರಿಯಿಂದ ನೆರವೇರಿಸಲು ಯೋಚಿಸಲಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕದಿಂದ ಎಲ್ಲವೂ ನುಚ್ಚುನೂರಾಗಿದೆ ಎಂದು ರೋಸಾಮಿಸ್ತಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೊಲಿಟಾ ಪಿರೇರಾ ಹೇಳಿದರು.gur-july-15-bhethani-2ಈ ವೇಳೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಲ್ಫ್ರೆಡ್ ಮಿನೆಜಸ್ ಮಾತನಾಡಿ, ಈ ಬಾರಿ ಯಾವುದೇ ಅದ್ದೂರಿ ಕಾರ್ಯಕ್ರಮ ಸಾಧ್ಯವಿಲ್ಲದಿದ್ದರೂ, ಸಂಘದ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಶಾಲೆಯ ಸುಮಾರು ೫೦ ಬಡ ವಿದ್ಯಾರ್ಥಿಗಳಿಗೆ ಅರ್ಧದಷ್ಟು ಶುಲ್ಕ ನೀಡಲು ಸಹಕರಿಸಬೇಕೆಂದರು. ಇದಕ್ಕೆ ಸಂಘದ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದದಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ವರ್ಷಗಳ ಹಿಂದೆ ಬೆಂದೂರು ಚರ್ಚ್ ನಲ್ಲಿ ಧರ್ಮಗುರುಗಳಾಗಿದ್ದ ಫಾ. ರೇಮಂಡ್ ಮಸ್ಕರೇನಸ್ ಅವರು ಶೀಘ್ರವೇ ಸಂತ ಪದವಿಗೇರಲಿ ಎಂದು ಬೆಥನಿ ಶಿಕ್ಷಣ ಸಂಸ್ಥೆ ಪ್ರಾರ್ಥನೆ ಸಲ್ಲಿಸಿತು.gur-july-15-bhethani-3ಸಭೆಯಲ್ಲಿ ಶಾಲೆಯ ಮಾಜಿ ಸಂಚಾಲಕಿ ಸಿಸ್ಟರ್ ಕನ್ಸೆಟ್ಟಾ ಬಿ ಎಸ್, ಸಂಸ್ಥೆಯ ಆಪ್ತ ಸಮಾಲೋಚಕಿ ಸಿಸ್ಟರ್ ಜ್ಯೂಲಿಯೆಟ್, ಶಿಕ್ಷಕರಾದ ಸಬಿನಾ ಕ್ರಾಸ್ತ, ಐಡಾ ಪಿರೇರಾ, ಅಶ್ರಿತಾ ಗೋನ್ಸಾಲ್ವಿಸ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ, ತಾಪಂ ಮಾಜಿ ಸದಸ್ಯ ಸುನಿಲ್ ಹಾಗೂ ಸಂಘದ ಪದಾಧಿಕಾರಿಗಳು -ಸದಸ್ಯರು ಉಪಸ್ಥಿತರಿದ್ದರು. ಹಿಂದಿ ಭಾಷಾ ಶಿಕ್ಷಕ ವಿನ್ಸೆಂಟ್ ಮಿನೆಜಸ್ ಸ್ವಾಗತಿಸಿ, ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಲ್ಯಾನ್ಸಿ ಸಿಕ್ವೇರ ವಂದಿಸಿದರು.

By Suddi9

Leave a Reply

Your email address will not be published. Required fields are marked *