ಕೈಕಂಬ: ಕುಂದಾಪುರ ಅಗ್ನಿಶಾಮಕ ದಳದ ನಾಗರಾಜ ಪೂಜಾರಿ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೊಡಮಾಡುವ ೨೦೨೦ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ವನ್ನು ಅವರಿಗೆ ನೀಡಿ ಗೌರವಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪದಕ ಪ್ರದಾನ ಮಾಡಿದರು. ಮೂಲತಃ ಸಾಸ್ತಾನದ ಪಾಂಡೇಶ್ವರ ಮೂಡಬೆಟ್ಟುವಿನ ನಾಗರಾಜ್ ಪೂಜಾರಿ ಅವರು ರಾಮ ಪೂಜಾರಿ ಹಾಗೂ ರಾಧಾ ದಂಪತಿಯ ಪುತ್ರ. ೨೦೦೮ರ ಬ್ಯಾಚಿನ ಸಿಬಂದಿಯಾಗಿರುವ ಇವರು ೨೦೦೯ ರಿಂದ ೨೦೧೫ ವರೆಗೆ ಕದ್ರಿಯಲ್ಲಿ ಪ್ರಸ್ತುತ ಕುಂದಾಪುರದಲ್ಲಿ ಸೇವೆ ಸಲ್ಲಿಸಿದ್ದಾರೆ. ೨೦೧೦ರ ವಿಮಾನ ದುರಂತದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದರು, ವೃತ್ತಿ ಜೀವನದಲ್ಲಿ ಅನೇಕ ಮಂದಿ ಬಾವಿಗೆ ಬಿದ್ದವರನ್ನು ರಕ್ಷಣೆ ಮಾಡಿದ ಅವರನ್ನು ಗುರುತಿಸಿದ ಸರ್ಕಾರ ಮುಖ್ಯ ಮಂತ್ರಿಗಳ ಪದಕ ನೀಡಿ ಗೌರವಿಸಿದ್ದಾರೆ.
