ಎಳ್ಳಾರೆ: ಕಡ್ತಲ ಗ್ರಾ.ಪಂ ವ್ಯಾಪ್ತಿಯ ಎಳ್ಳಾರೆ ಗ್ರಾಮದಲ್ಲಿ ಕಳೆದವಾರ ಭಾರೀ ಮಳೆ ಹಾಗೂ ಗಾಳಿಯಿಂದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರ ಮನೆಯ ಮೇಲ್ಛಾವಣಿ ಹಾರಿ ಹೋಗಿ ಹಾನಿಯಾಗಿರುತ್ತದೆ.
ಹಾಗೂ ಮೊನ್ನೆ ಹೊಯ್ಗೆಜಡ್ಡುವಿನ ಕಾಳು ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದ್ದು,ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದೇವೇಂದ್ರ ಕಾಮತ್ ಎಳ್ಳಾರೆಯವರು ಎರಡೂ ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸಿದರು.
