ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆmbd_feb18_4(a)

 

 

 

 

 

 

 

 

mbd_feb18_4

ಸುದ್ದಿ9 ಕೈಕಂಬ ; ಧರ್ಮ ಎಂಬುದು ಜೀವನದ ಪದ್ಧತಿ. ಧರ್ಮದ ಸರಿಯಾದ ಪಾಲನೆಯಿಂದ ನಮ್ಮಲ್ಲಿರುವ ಸದ್ಗುಣ ಪ್ರಜ್ವಲಿಸುತ್ತದೆ. ಸರಿತಪ್ಪುಗಳನ್ನು ಸಮಾಜಕ್ಕೆ ತಿಳಿಸುವುದೇ ಧರ್ಮ ಎಂದು ಶ್ರೀ ಧವಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ.ವಾಸುದೇವ ಭಟ್ ಹೇಳಿದರು. ಅವರು ಇರುವೈಲ್ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಧಾಮರ್ಿಕಸಭೆಯಲ್ಲಿ ಉಪನ್ಯಾಸ ನೀಡಿದರು. ಇರುವೈಲ್ ಶ್ರೀ ದುಗರ್ಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ದೇವಳದ ಒಳಾಂಗಣ ಶಾಶ್ವತ ಚಪ್ಪರ ನಿಮರ್ಾಣಕ್ಕಾಗಿ 2.60 ಲ.ರೂ. ದೇಣಿಗೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುಜಂಗ ಆರ್.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ದೇವಳದ ವಾಷರ್ಿಕ ಧಾಮರ್ಿಕ ಕಲಾಪಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಶ್ರೀಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದ್ದ, ಇತ್ತೀಚೆಗೆ ನಿಧನ ಹೊಂದಿದ ರಮೇಶ ಭಟ್ ಅವರ ಪುತ್ರಿಯ ವಿದ್ಯಾಭ್ಯಾಸಕ್ಕಾಗಿ ಶಾಂತಾ ರಮೇಶ ಭಟ್ ಅವರಿಗೆ ಸಹಾಯಧನ ವಿತರಿಸಲಾಯಿತು. ದೇವಳದ ಪ್ರಧಾನ ಆರ್ಚಕ ಐ.ರಾಘವೇಂದ್ರ ಅಸ್ರಣ್ಣ ಆಶೀರ್ವಚನವಿತ್ತರು. ಭುಜಂಗ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇರುವೈಲು ಶ್ರೀನಿವಾಸ ಅಸ್ರಣ್ಣ ,ಕುಮಾರ್ ಪೂಜಾರಿ, ದಾಮೋದರ ಶೆಟ್ಟಿ, ಜಗದೀಶ ಶೆಟ್ಟಿ, ದಿನೇಶ್ ಕಟ್ಟಣಿಗೆ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಕಾರ್ಯದಶರ್ಿ ಪೂವಪ್ಪ ಸಾಲಿಯಾನ್ ಸ್ವಾಗತಿಸಿದರು. ಉಮೇಶ ಪ್ರಸಾದ್ ಪೆರಿಂಜೆ ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದರೆ `ಯಕ್ಷೊಪಾಸನಂ’ ತಂಡದಿಂದ ತಾಳಮದ್ದಳೆ, ರಾತ್ರಿ ಪ್ರಹ್ಲಾದ್ ಆಚಾರ್ಯರಿಂದ ಶ್ಯಾಡೋ ಪ್ಲೇ, ಮಾತನಾಡುವ ಗೊಂಬೆ ಜಾದೂ, ನಡುಬಲಿ ಉತ್ಸವ, ಚಂದ್ರಮಂಡಲ ಸೇವೆ, ಬಾಕಿಮಾರು ದೀಪೋತ್ಸವ ನಡೆಯಿತು.

By suddi9

Leave a Reply

Your email address will not be published. Required fields are marked *