ಕೈಕಂಬ : ಒಡ್ಡೂರು ಶ್ರೀ ಕೊಡಮಣಿತ್ತಾಯಿ ಕಾಲಾವದಿ ನೇಮೋತ್ಸವವು ಎ.೧೮ ರಂದು ಭಾನುವಾರ ನಡೆಯಿತು. ಶ್ರೀಮತಿ ಉಷಾ ಮತ್ತು ರಾಜೇಶ್ ನಾಯ್ಕ್ ದಂಪತಿಗಳ ಒಡ್ಡೂರು ದೈವಸ್ಥಾನದ ನೇಮೋತ್ಸವವಕ್ಕೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ರವೀಶ್ ಶೆಟ್ಟಿ ಕಾರ್ಕಳ, ಉದಯ ಕುಮಾರ್ ರಾವ್, ಡೊಂಬಯ್ಯ ಅರಳ, ಪುರುಷೋತ್ತಮ ಶೆಟ್ಟಿ, ಪ್ರದೀಪ್ ಕುಮಾರ್ ಅಜ್ಜಿಬೆಟ್ಟು, ರಮಾನಾಥ ರಾಯಿ ಇದ್ದರು.
ಉಳಿಪಾಡಿ ಗುತ್ತಿನವರಾದ ತಾರನಾಥ್ ಆಳ್ವ, ಅರುಣ್ ಆಳ್ವ, ಉದಯ ಆಳ್ವ ಹಾಗೂ ಪವನ್ ಕುಮಾರ್, ರಿತೇಶ್ ಮಾರ್ಲ, ರುಕ್ಮಯ ನಾಯ್ಕ್, ಸುಧೀರ್ ನಾಯ್ಕ್, ಕೇಶವ ಒಡ್ಡೂರು, ಸಚಿನ್ ಅಡಪ್ಪ, ಮುಂತಾದವರು ಉಪಸ್ಥಿತರಿದ್ದರು.




