ಉಜಿರೆ: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಉದ್ದೇಶವಾಗಿದೆ ಹೊರತು ಕೇವಲ ಲಾಭ ಗಳಿಸುವುದು ಅಲ್ಲ ಎಂದು ಮಾ 28 ರಂದು ಮಹಾವೀರಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹಾಗೂ ಖ್ಯಾತ ವಕೀಲ ಪಿ.ಪಿ ಹೆಗ್ಡೆ ಮಂಗಳೂರು ಹೇಳಿದರು. ಉಜಿರೆಯಲ್ಲಿ ಭಾನುವಾರ ಮಹಾವೀರಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ೮ನೆ ಶಾಖೆ ಉದ್ಘಾಟಿಸಲ್ಪಟ್ಟಿದ್ದು ಸಮಾರಂಭದ ಅಧ್ಯಕ್ಷತೆ ವಹಿಸಿ ಪಿ.ಪಿ ಹೆಗ್ಡೆ ಮಾತನಾಡಿ ಉಜಿರೆ ಶಾಖೆಯಲ್ಲಿ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುವುದು.
ಈಗಾಗಲೇ ಶಾಖೆಯಲ್ಲಿ ಎರಡು ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಸದ್ಯದಲ್ಲಿಯೇ ಧರ್ಮಸ್ಥಳ, ಬೆಳ್ತಂಗಡಿ, ವೇಣೂರು ಮತ್ತು ಮಡಂತ್ಯಾರಿನಲ್ಲಿ ಸೊಸೈಟಿಯ ಶಾಖೆಗಳು ಆರಂಭಗೊಳ್ಳುತ್ತವೆ. ೨೦೨೫ರ ಒಳಗೆ ೨೫ ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಮುಂದೆ ೧೦೦ ಶಾಖೆಗಳ ಮೂಲಕ ೧೦೦ ಕೋಟಿ ರೂ.ಠೇವಣಿ ಸಂಗ್ರಹಿಸಲಾಗುವುದು. ಮಹಾವೀರಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಮುಂದೆ ಮಹಾವೀರ ಬ್ಯಾಂಕ್ ಆಗಲಿದೆ ಎಂದರು.
ಕಾನೂನು ನೆಲೆಯಲ್ಲಿ ಕಕ್ಷಿಗಾರರನ್ನು ದೇವರ ಪ್ರತಿನಿಧಿಗಳೆಂದು ಭಾವಿಸಿತಾನು ಸೇವೆ ಮಾಡುತ್ತೇನೆ. ಪ್ರೀತಿ ವಿಶ್ವಾಸಕ್ಕಿಂತ ಮಿಗಿಲಾದ ಶಕ್ತಿ ಯಾವುದೂಇಲ್ಲ. ಸಮಾಜ ಬಾಂಧವರು ಹಾಗೂ ಗ್ರಾಹಕರ ಪ್ರೀತಿ ವಿಶ್ವಾಸವೇ ಸೊಸೈಟಿಯ ಪ್ರಗತಿಗೆ ಕಾರಣವಾಗಿದೆ ಎಂದು ಹೇಳಿದರು. ಕಾನೂನಿನ ಚೌಕಟ್ಟಿನೊಳಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಎಸ್‌ಡಿಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್.ಪ್ರಭಾಕರ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳು ಗ್ರಾಹಕರಿಗೆಉತ್ತಮ ಸೇವೆಯನ್ನು ನೀಡುತ್ತಿವೆ. ಸಿಬ್ಬಂದಿಗಳು ಎಲ್ಲಾ ಗ್ರಾಹಕರಿಗೆ ಪ್ರೀತಿ ವಿಶ್ವಾಸದೊಂದಿಗೆ ಸೌಜನ್ಯಪೂರ್ಣ ಸೇವೆ ನೀಡಬೇಕು ಎಂದು ಸಲಹಿದರು. ವಿಧಾನ ಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್, ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರಜೈನ್ ಮತ್ತು ಉಜಿರೆಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಆರ್.ಶೆಟ್ಟಿ ಶುಭಾಶಂಸನೆ ಮಾಡಿದ್ದು ಕಾರ್ಯಕ್ರಮದಲ್ಲಿ ಕಟ್ಟಡದ ಮೂಲಕ ಬಾಲಕೃಷ್ಣ ಆರಿಪ್ಪಾಡಿತ್ತಾಯ ಅವರನ್ನು ಸನ್ಮಾನಿಸಲಾಯಿತು.
ಮಹಾವೀರಕ್ರೆಡಿಟ್ ಸೊಸೈಟಿಯು ಮುಂದೆ ಮಹಾವೀರ ಬ್ಯಾಂಕ್ ಆದಾಗ ತಮ್ಮ ಕಟ್ಟಡದಲ್ಲಿ ಎರಡು ಸಾವಿರ ಚದರ ಅಡಿ ಜಾಗವನ್ನು ಬ್ಯಾಂಕ್‌ಗೆಉಚಿತವಾಗಿ ನೀಡುವುದಾಗಿ ಆರಿಪ್ಪಾಡಿತ್ತಾಯ ಭರವಸೆ ನೀಡಿದರು. ಎಸ್.ಡಿ ಸಂಪತ್ ಸಾಮ್ರಾಜ್ಯ ಶಿರ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ವರ್ಷ ಸೊಸೈಟಿ೨೫೦ ಕೋಟಿರೂ.ವ್ಯವಹಾರ ಮಾಡಿ ಸದಸ್ಯರಿಗೆ ಶೇ.೧೬ ಲಾಭಾಂಶ ನೀಡಲಾಗಿದೆ ಎಂದರು. ಪ್ರವೀಣಕುಮಾರ್ ಇಂದ್ರ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಕೆ.ಸುರೇಶ್ ಜೈನ್ ಧನ್ಯವಾದವಿತ್ತರು.
