ಶ್ರೀ ಮಂಜುನಾಥೇಶ್ವರ ರಾಜ್ಯ ಭಜನಾ ಪರಿಷತ್‌ನ ವಾರ್ಷಿಕ ಸಭೆ
ಉಜಿರೆ: ಭಜನಾ ಮಂಡಳಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಭಜನಾ ಸಂಸ್ಕöÈತಿಯನ್ನು ಬೆಳೆಸಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು.
ಸೆ.18ರಂದು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಶ್ರೀ ಮಂಜುನಾಥೇಶ್ವರ ರಾಜ್ಯ ಭಜನಾ ಪರಿಷತ್‌ನ ವಾರ್ಷಿಕ ಸಭೆಯು ಭಜನಾ ಕಮ್ಮಟದ ಅಧ್ಯಕ್ಷರಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಭಜನೆಯು ಸಮಾಜದಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತದೆ. ಭಜನೆಯಿಂದ ಅಗೋಚರವಾದ ಫಲಿತಾಂಶ ಸಿಗುತ್ತದೆ. ಭಜನಾ ಕಮ್ಮಟಕ್ಕೆ ತುಂಬಾ ಉತ್ಸಾಹದಿಂದ ಶಿಬಿರಾರ್ಥಿಗಳು ಬಂದಿರುತ್ತಾರೆ. ವಿಕೃತಿ ದೂರವಾಗಿ ಭಜನಾ ಸಂಸ್ಕöÈತಿ ಬೆಳೆಸಬೇಕಾಗಿದೆ. ಇದಕ್ಕೆ ಭಜನೆಯೆ ಪೂರಕ. ಧಾರ್ಮಿಕ ಮೆರವಣಿಗೆಗಳಲ್ಲಿ ಭಜನಾ ಕಾರ್ಯಕ್ರಮ ಇನ್ನು ಆಕರ್ಷಣೀಯವಾಗಿರಬೇಕು. ದೇಹದಂಡನೆಯ ಮೂಲಕ ದೇವರಿಗೆ ಭಕ್ತಿಯ ಸಮರ್ಪಣೆ ಮಾಡಬೇಕಾಗಿದೆ. ಭಜನಾ ಕಮ್ಮಟದ ಮೂಲಕ ಭಜನೆಗೆ ಗೌರವ ಬಂದಿದೆ. ಭಜನಾ ಕಮ್ಮಟವು ಭಜನಾ ಪರಿಷತ್‌ನ ಮೂಲಕ ಮಕ್ಕಳಲ್ಲಿ ಭಜನಾ ಜಾಗೃತಿ ಮೂಡಿಸಿದೆ.ಭಜನೆಯಿಂದ ಜಾತ್ಯಾತೀತ ಸಂಸ್ಕöÈತಿ ಮಾಡಿಸಬೇಕಾಗಿದೆ ಎಂದು ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಸಂದೇಶ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಮಾತೃಶ್ರೀ ಡಾ|| ಹೇಮಾವತಿ ವೀ. ಹೆಗ್ಗಡೆಯವರು ಭಜನಾ ಮಂಡಳಿಯ ಮೂಲಕ ಪ್ರತೀ ಮನೆ ಮನೆಗೆ ಭಜನೆಯನ್ನು ತಲುಪಿಸುವ ಕೆಲಸವಾಗಬೇಕಾಗಿದೆ. ಭಜನೆಯ ಜೊತೆಗೆ ವ್ಯಕ್ತಿತ್ವವಿಕಸನವಾಗಬೇಕಾಗಿದೆ. ಭಜನೆಯಿಂದ ಬದಲಾವಣೆ ಎಂಬ ಶ್ಲೋಗನ್ ನಮ್ಮದಾಗಬೇಕು. ಭಜನೆಯಿಂದ ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸವಾಗಬೇಕು. ಶ್ಲೋಕಗಳು ಪುರಾಣಗಳ ಪರಿಚಯವಾಗಬೇಕು. ಹುಟ್ಟುಹಬ್ಬ, ಮದುವೆ ಗೃಹಪ್ರವೇಶಕ್ಕೆ ಭಜನಾ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದು ಮಾರ್ಗದರ್ಶನ ನೀಡಿದರು.
ಮಾಣಿಲ ಶ್ರೀ ಮಹಾಲಕ್ಷ್ಮಿ ಸೇವಾಪ್ರತಿಷ್ಠಾನದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಭಜನೆ ಎನ್ನುವುದು ದೊಡ್ಡ ಶಕ್ತಿ, ಭಜನೆಯಲ್ಲಿ ಭಾವನೆ, ಭಕ್ತಿ ಮುಖ್ಯ. ಪ್ರತೀ ಗ್ರಾಮದಲ್ಲಿ ಭಜನೆಯನ್ನು ಬೆಳೆಸಬೇಕಾಗಿದೆ. ಭಜನೆಯಿಂದಲೇ ದೇವಸ್ಥಾನಗಳ ಜೀರ್ಣೋದ್ದಾರವಾಗಿರುತ್ತದೆ. ಭಜನೆಗೆ ವಿಶೇಷವಾದ ಶಕ್ತಿ ಇದೆ. ಭಜನಾ ಪರಿಷತ್‌ನ ಮೂಲಕ ಭಜನಾ ಮಂಡಳಿಗಳ ಬಲವರ್ಧನೆ ಆಗಬೇಕಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡಕಾಸರಗೋಡು ಚಿಕ್ಕಮಗಳೂರು ಹದಿನೈದು ತಾಲೂಕುಗಳ ಭಜನಾ ಪರಿಷತ್ ನ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು. ತಾಲೂಕುವಾರು ಸಾಧನೆಯ ವರದಿಯನ್ನು ಹಾಗೂ ಪರಿಷತ್ ನ ಬಲವರ್ಧನೆಗೆ ಪೂರಕ ಸಲಹೆ ಸೂಚನೆಗಳನ್ನು ನೀಡಿದರು.
ರಾಜ್ಯ ಭಜನಾ ಪರಿಷತ್ ನ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಪಂಜ ಅವರು ಉಪಸ್ಥಿತರಿದ್ದರು. ರಾಜ್ಯ ಭಜನಾ ಪರಿಷತ್ ನ ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ ಸ್ವಾಗತಿಸಿ, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.