ಕೈಕಂಬ : ಎ 21 ರಿಂದ 28 ರವರೆಗೆ ನಡೆಯುವ ಹನುಮಾನ್ ಮಂದಿರದ ಬ್ರಹ್ಮ ಕಲಶಾಭಿಷೇಕದ ಪ್ರಯುಕ್ತ ಮನೆ ಮನೆಯಲ್ಲಿ ಹನುಮ ಶಕ್ತಿಯನ್ನು ಉದ್ದೀಪನ‌ಗೊಳಿಸಲು ಹಾಗೂ ಪರಿಸರದಲ್ಲಿ ಭಕ್ತಿ ಸಂಚಯನ ಮೂಡಿಸುವುದರ ಜೊತೆಗೆ ಗ್ರಾಮದ ಪ್ರತಿ ಮನೆಗೆ‌ ಆಮಂತ್ರಣ ನೀಡುವ ವಿಶೇಷ ಪರಿಕಲ್ಪನೆಯ ಮನೆ ಮನೆಗೆ ಹನುಮ ಕಾರ್ಯಕ್ರಮ ಇಂದು ಆರಂಭಗೊಂಡಿತು.WhatsApp Image 2021-03-25 at 12.15.49 PM (1)

ವೇದಮೂರ್ತಿ ರತೀಶ್ ಭಟ್ ಪಲ್ಕೆ, ಗುರುರಾಜ್ ಭಟ್, ವಿಜೇತ ಭಟ್ ಎಡಪದವು ಇವರು ಪೂಜಾ ಕೈಂಕರ್ಯ ನಡೆಸಿ ಭಜನಾ ಕಾರ್ಯಕರ್ಮಕ್ಕೆ ಚಾಲನೆ ನೀಡಿದರು. ಹಿರಿಯ ಭಜಕರಾದ ಕೃಷ್ಣ ಸಫಳಿಗ, ಅಗರಿ ದಿನೇಶ್ ರಾವ್, ಗೋಪಾಲ್ ದಾಸ್, ಮಾಧವ ಶೆಣೈ, ಬಾಲಕೃಷ್ಣ ಶೆಟ್ಟಿ ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿಯ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಸೇರಿದಂತೆ ಅನೇಕ ಹಿರಿಯ ಭಜಕರು ಗಣೇಶನ ಭಜನೆ ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭ ವಾಯಿತು.WhatsApp Image 2021-03-25 at 12.15.49 PM

ಶ್ರೀ ರಾಮ ಮಕ್ಕಳ ಕುಣಿತ ಭಜನಾ ತಂಡದವರು ಪ್ರತೀ ಮನೆಯಲ್ಲೂ ಕುಣಿತ ಭಜನೆ ಮಾಡಿದರು. ನಾರಾವಿಯ ಮಕ್ಕಳ ಕುಣಿತಾ ಭಜನಾ ತಂಡದ ಅಧ್ಯಕ್ಷ ಹಾಗೂ ಮಕ್ಕಳು ಈ ಸಂದರ್ಭದಲ್ಲಿ‌ ಉಪಸ್ಥಿತರಿದ್ದರು. ಹನುಮಾನ್ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿಜಯ ಗೌಡ ಶಿಬ್ರಿಕೆರೆ ಹಾಗೂ ಕಾರ್ಯದರ್ಶಿ ಮುರಳೀಧರ ಕೋಟ್ಯಾನ ಎಡಪದವು, ವಾಮನ ಕಣ್ಣೋರಿ ಬೂಬ ಕೊಂದೋಡಿ, ಗಣಪತಿ‌ ಶಿಬ್ರಿಕೆರೆ, ರಮೇಶ ಶಿಬ್ರಿಕೆರೆ, ದೇವಣ್ಣ ಪದ್ರೆಂಗಿ ಸೇರಿದಂತೆ‌ ಅನೇಕ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.WhatsApp Image 2021-03-25 at 12.15.48 PM (1)

ಎಡಪದವಿನ ರಾಮ ಮಂದಿರದಲ್ಲಿ ಮೊದಲು ಭಜನೆ ನೆರವೇರಿಸಲಾಯಿತು.‌ನಂತರ ಗ್ರಾಮದ ಪ್ರಥಮ ಪ್ರಜೆ ಸುಕುಮಾರ ದೇವಾಡಿಗ ರವರ ಮನೆಯಲ್ಲಿ ಭಜನಾ ಕಾರ್ಯಕ್ರಮ ನೆರವೇರಿಸಿ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.‌WhatsApp Image 2021-03-25 at 12.15.48 PM

ನಂತರ  ಕಣ್ಣೋರಿ ಪ್ರದೇಶದ ಮನೆಗಳಿಗೆ ೨ ತಂಡಗಳಲ್ಲಿ ತೆರಳಿ ಆಮಂತ್ರಣ ನೀಡಿ ಬ್ರಹ್ಮಕಲಾಶಭೀಷೇಕ ಕಾರ್ಯಕ್ರಮಕ್ಕೆ ಸಹಕಾರ ಕೋರಲಾಯಿತು.ಗ್ರಾಮದ ಪ್ರತಿ ಮನೆಗೆ ತಲುಪುವವರೆಗೆ ಈ ಕಾರ್ಯಕ್ರಮ ನಿರಂತರವಾಗಿ‌ ನಡೆಯಲಿದೆWhatsApp Image 2021-03-25 at 12.15.47 PM

By Suddi9

Leave a Reply

Your email address will not be published. Required fields are marked *