ಕೈಕಂಬ: ಪೊಳಲಿ ಎಸ್ .ಡಿ. ಎಮ್. ಸಿ ಸದಸ್ಯರಿಗೆ ತರಬೇತಿ ಕಾರ್ಯಗಾರವು ಸರಕಾರಿ ಪ್ರೌಢಶಾಲೆಯಲ್ಲಿ ಫೆ.೧೨ರಂದು ಶುಕ್ರವಾರ ನಡೆಯಿತು. ಬೆಂಜನಪದವು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಶಿಕ್ಷಕರಾದ ಅನಂತ ಪದ್ಮನಾಭ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಅಧ್ಯಕ್ಷತೆ ಯನ್ನು ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ಭಟ್ ವಹಿಸಿದ್ದರು. ಬಿ ಮೂಡದ ಸಮುಹ ಸಂಪನ್ಮೂಲ ವ್ಯಕ್ತಿ ಯಾದ ಉಷಾ ಸುವರ್ಣ, ವಿದ್ಯಾ ಹಾಗೂ ವಿಶೇಷ ಸಂಪನ್ಮೂಲ ಶಿಕ್ಷಕರಾದ ಸುರೇಖ ಉಪಸ್ಥಿತರಿದ್ದರು.
