ಹಳೆಯಂಗಡಿ: ಅತ್ಯಂತ ಕುತೂಹಲ ಮೂಡಿಸಿರುವ ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಫೆಬ್ರವರಿ 10 ರಂದು ನಡೆದ ಸಮಬಲದ ಹೋರಾಟದಲ್ಲಿ ಬಿಜೆಪಿ ಬೆಂಬಲಿಗರಿಗೆ ಅದೃಷ್ಟ ಒಲಿದು ಬಂದಿದೆ.
ಇದೀಗ ಹಳೆಯಂಗಡಿ ಪಂಚಾಯತ್ ಆಡಳಿತ ಕಾಂಗ್ರೇಸ್ ತೆಕ್ಕೆಯಿಂದ ಬಿಜೆಪಿಯ ಕಡೆಗೆ ಬಂದಿದೆ ಹಳೆಯಂಗಡಿ ಪಂಚಾಯತ್ ನ ಒಟ್ಟು 22 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರು ತಲಾ 11 ಸ್ಥಾನಗಳನ್ನು ಪಡೆದಿದ್ದು ಇಲ್ಲಿ ಟಾಸ್ ನಿರ್ಣಾಯಕವಾಗಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಪದ್ಮಾವತಿ ಶೆಟ್ಟಿ, ಬಿಜೆಪಿ ಬೆಂಬಲಿತ ಪೂರ್ಣಿಮಾ ಸ್ಪರ್ಧಿಸಿದ್ದು ಬಿಜೆಪಿ ಬೆಂಬಲಿತ ಪೂರ್ಣಿಮಾ ಅಧ್ಯಕ್ಷೆಯಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಚಂದ್ರಕುಮಾರ್, ಬಿಜೆಪಿ ಬೆಂಬಲಿತ ಅಶೋಕ್ ಬಂಗೇರ ಸ್ಪರ್ಧಿಸಿದ್ದು ಬಿಜೆಪಿ ಬೆಂಬಲಿತ ಅಶೋಕ್ ಬಂಗೇರ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿ ಬೆಂಬಲಿತರಿಗೆ ಟಾಸ್ ಮೂಲಕ ಅದೃಷ್ಟ ಖುಲಾಯಿಸಿದೆ.
