ಕೈಕಂಬ: ಕೋಮುವಾದಕ್ಕೆ ಪ್ರಚೋದನೆ ನೀಡುವ ಬಿಜೆಪಿ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಲ್ಪಸಂಖ್ಯಾತರ ಮತ ಒಡೆಯುವ ಎಸ್‌ಡಿಪಿಐ ವಿಷಯದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸುವೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ತಿಳಿಸಿದರು.
ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ ಬ್ಲಾಕ್ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿರುವ ಸದಸ್ಯರಿಗೆ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಸೋಮವಾರ ಆಯೋಜಿಸಿದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಗುರುಪುರ ಗ್ರಾಪಂನ ೮, ಅಡ್ಯಾರ್ ೧೩, ಗಂಜಿಮಠದ ೭, ಕಂದಾವರದ ೫, ಪಡುಪೆರಾರದ ಮೂವರು, ಮುತ್ತೂರು ೨, ಮಲ್ಲೂರು, ನೀರುಮಾರ್ಗ ಮತ್ತು ಉಳಾಯಿಬೆಟ್ಟಿನ ತಲಾ ಒಬ್ಬರು ಒಬ್ಬರು ಸದಸ್ಯರನ್ನು ಶಾಲು ಹಾಕಿ ಅಭಿನಂದಿಸಲಾಯಿತು.
ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಎಸ್‌ಡಿಪಿಐ ಕಾಂಗ್ರೆಸ್ ಓಟಕ್ಕೆ ಅಡ್ಡಗಾಲಿಟ್ಟಿದ್ದಾರೆ. ಇದು ಚರ್ಚಿಸುವಂತಹ ವಿಷಯವಾಗಿದೆ. ಅದು ಅಲ್ಪಸಂಖ್ಯಾತರ ಮತ ಒಡೆಯುವ ತಂತ್ರಗಾರಿಕೆಯಲ್ಲಿ ಪಳಗಿದೆ ಎಂದು ಮಾಜಿ ಶಾಸಕ ಮಾಜಿ ಶಾಸಕ ಮೊಯಿದಿನ್ ಬಾವಾ ಹೇಳಿದರು.
ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಸೆಲಿನಾ ಫೆರ್ನಾಂಡಿಸ್, ಮನಪಾ ಕಾರ್ಪೊರೇಟರ್ ನವೀನ್ ಡಿ’ಸೋಜ ಹಾಗೂ ಗುರುಪುರ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಲ್ಲಿ, ಹರೀಶ್ ಭಂಡಾರಿ, ಸಚಿನ್ ಅಡಪ, ಸದಾಶಿವ ಶೆಟ್ಟಿ ಕೆ, ಸೆಲಿನಾ ಫೆರ್ನಾಂಡಿಸ್, ಝಾಕಿರ್ ಆರ್ ಎಸ್, ಸುನಿಲ್ ಪೂಜಾರಿ, ವಿಜಯಾ ಜಿ ಸುವರ್ಣ, ದಾವೂದ್, ಉಮೈಭಾನು ಹಾಗೂ ವಿವಿಧ ಬ್ಲಾಕುಗಳ ವಲಯಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬಾಷಾ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
