ಎಳ್ಳಾರೆ: ಶ್ರೀ ಅಯ್ಯಪ್ಪಸ್ವಾಮಿ ಮಂದಿರದಲ್ಲಿ ಅಯ್ಯಪ್ಪ ಭಕ್ತ ವೃಂದದ ನೇತೃತ್ವದಲ್ಲಿ ಶ್ರೀ ಶ್ರೀನಿವಾಸ್ ಭಟ್ ರವರ ಪೌರೋಹಿತ್ಯದಲ್ಲಿ ದಿನಾಂಕ 9 ರಂದು ಶನಿವಾರ ರಾತ್ರಿ ಘಂಟೆ 7 ಕ್ಕೆ ಶ್ರೀ ಲಕ್ಷ್ಮೀಜನಾರ್ಧನ ಭಜನಾ ಮಂಡಳಿ ಎಳ್ಳಾರೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಮಹಿಳಾ ಮಂಡಳಿ ಸಿರಿಬೈಲು ಇವರಿಂದ ಭಜನಾ ಕಾರ್ಯಕ್ರಮ.
ಹಾಗೂ ರಾತ್ರಿ ಘಂಟೆ 9.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಡೆಯಲಿದೆ. ನಂತರ ಮರುದಿನ ದಿನಾಂಕ 10 ರವಿವಾರದಂದು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿದೆ.
