
ಬೆಂಗಳೂರು: ಮುಜರಾಯಿ ಇಲಾಖೆ ಅದೀನದಲ್ಲಿರುವ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ ನಲ್ವತ್ತು ಲಕ್ಷ ರೂ, ಅನುದಾನ ಬಿಡುಗಡೆ ಮಾಡುವುದಾಗಿ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು ಸದ್ಯ ವಿಧಾನಸಭಾ ಸದಸ್ಯರಿಗೆ ಮಾತ್ರ ಅನುದಾನ ಲಭ್ಯವಾಗುತ್ತಿದ್ದು ವಿಧಾನ ಪರಿಷತ್ ಸದಸ್ಯರಿಗೂ ಈ ಅನುದಾನವನ್ನು ವಿಸ್ತರಿಸಲಾಗುವುದು ಎಂದು ಹುಕ್ಕೇರಿ ತಿಳಿಸಿದರು. ಅನುದಾನ ಬಿಡುಗಡೆಯಲ್ಲೂ ಪಕ್ಷ ರಾಜಕಾರಣ ಮಾಡಲಾಗುತ್ತಿದೆ ಎಂಬ ಬಿಜೆಪಿ ಸದಸ್ಯರ ಆರೋಪವನ್ನು ತಳ್ಳಿ ಹಾಕಿದ ಅವರು ಯಾವುದೇ ಬೇಧಭಾವ ಇಲ್ಲದೆ ಅನುದಾನ ಬಿಡುಗಡೆ ಮಾಡಲಾಗುದು ಎಂದು ಭರವಸೆ ನಿಡಿದರು
