ದೆಹಲಿ: ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿಯಿರುವಂತೆ ಮಂಡಿಸಲಾಗಿರುವ ಬಜೆಟ್ ಮಧ್ಯಮ ವರ್ಗದ ಓಲೈಕೆಗೆ ಹೆಚ್ಚಿನ ಒತ್ತು ನೀಡಿರುವಂತೆ ಕಂಡುಬರುತ್ತಿದೆ. ವಿತ್ತ ಸಚಿವ ಚಿದಂಬರಮ್ ಬಜೆಟ್ನಲ್ಲಿ ಯಾವುದೇ ಹೊಸತನವಿಲ್ಲ ಮತ್ತು ಹೆಚ್ಚಿನ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವತ್ತಲೂ ಗಮನ ನೀಡಲಾಗಿಲ್ಲ.
ಫ್ರಿಜ್, ಕ್ಯಾಮೆರಾ, ಕಂಪ್ಯೂಟರ್, ಇಸ್ತ್ರಿಪೆಟ್ಟಿಗೆ, ಡಿವಿಡಿ ಪ್ಲೇಯರ್ ಮುಂತಾದ ವಿದ್ಯುತ್ ಉಪಕರಣಗಳ ಬೆಲೆಯನ್ನು ಇಳಿಸಲಾಗಿದೆ. ರೂ. ಎರಡು ಸಾವಿರಕ್ಕಿಂತ ಹೆಚ್ಚಿನ ದರದ ಮೊಬೈಲ್ಗಳ ದರವನ್ನು ಏರಿಸಲಾಗಿದೆ. ಕಾರು, ವಾಣಿಜ್ಯ ವಾಹನಗಳ ಮೇಲಿನ ಅಬಕಾರಿ ಸುಂಕ ಶೇ. 12ರಿಂದ 8ಕ್ಕೆ ಕಡಿತ ಮಾಡಲಾಗಿದೆ. ಒಟ್ಟಾರೆಯಾಗಿ ಚುನಾವಣಾ ದೃಷ್ಠಿಕೋನದಿಂದ ಮಂಡಿಸಲಾಗಿರುವ ಬಜೆಟ್ ತೀರಾ ಸಪ್ಪೆಯಾಗಿದೆ ಎಂದು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
