ಬಂಟ್ವಾಳ : ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಜೀವ ವಿಮಾ ನಿಗಮದ ಜನಶ್ರೀ ವಿಮಾ ಯೋಜನೆಯ ಸದಸ್ಯ ತಾರನಾಥ ಸಪಲ್ಯ ತುಪ್ಪೆಕಲ್ಲು ನಿಧನರಾಗಿದ್ದು , ವಿಮಾ ಪರಿಹಾರ ಮೊತ್ತ 31.000(ಮೂವತ್ತೊಂದು ಸಾವಿರ)ರೂ.ಗಳನ್ನು ಡಾ.ರಮೇಶ್ ರಾವ್ ಹಾಗೂ ಸೇವಾಂಜಲಿ ಪ್ರತಿಷ್ಠಾನ ಅಧ್ಯಕ್ಷ ವಜ್ರನಾಭ ಶೆಟ್ಟಿ ಯವರು ಮೃತರ ಪತ್ನಿ ಶಾರದಾರವರಿಗೆ ಹಸ್ತಾಂತರಿಸಿದರು .

ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟೀ ಕೃಷ್ಣ ಕುಮಾರ್ ಪೂಂಜ , ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್ , ಕಾರ್ಯದಶರ್ಿ ಸಂಜೀವ ಪೂಜಾರಿ ಗುರುಕೃಪಾ , ಬಿ.ರಾಮಚಂದ್ರ ರಾವ್ , ಎಂ.ಕೆ.ಖಾದರ್ , ಹರೀಶ್ ಪೆರ್ಗಡೆ , ಮಾಜಿ ಜಿ.ಪಂ.ಸದಸ್ಯೆ ಹರಿಣಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು
