ಬಂಟ್ವಾಳ : ಸೇ ವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರೀ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಮನೋರೋಗ ಶಿಬಿರ ಮತ್ತು ಮುಕ್ತ ಸಂವಾದ ಕಾರ್ಯಕ್ರಮವು 08-10-2014 ನೇ ಬುಧವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು . ಈ ಶಿಬಿರದಲ್ಲಿ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ.ಸತೀಶ್ ರಾವ್ ಹಾಗೂ ಡಾ.ನಿಶಿ ಗುರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು . ಈ ಸಂದರ್ಭ ಸೇವಾಂಜಲಿಯ ವಜ್ರನಾಭ ಶೆಟ್ಟಿ , ಕೆ.ಕೆ.ಪೂಂಜ , ರೋ.ಕ್ಲ.ಅಧ್ಯಕ್ಷ ಪ್ರಕಾಶ್ ಕಾರಂತ್ ,ಕಾರ್ಯದಶರ್ಿ ಸಂಜೀವ ಪೂಜಾರಿ , ಶಿಕ್ಷಕ ಬಿ.ರಾಮಚಂದ್ರ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಸುಮಾರು 250 ಮಂದಿ ಈ ಶಿಬಿರದ ಪ್ರಯೋಜನ ಪಡಕೊಂಡರು .

