ಮೂಡುಬಿದಿರೆ : ಇಲ್ಲಿನ ಧವಳಾ ಕಾಲೇಜಿನ ಉಪನ್ಯಾಸಕಿ, ಹಾಗೂ ವಿಭಾಗ ಮುಖ್ಯಸ್ಥೆ ಸ್ನೇಹಲತಾ (42) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.
ಅವರಿಗೆ ಪತಿ, ಪುತ್ರ ಇದ್ದಾರೆ.

187342eb-237e-4a03-ae22-423e96787b31
ಕಡಬ ತಾಲೂಕಿನ ಬಾಳ್ತಿಲದವರಾದ ಅವರು ಧವಳಾ ಕಾಲೇಜಿನಲ್ಲಿ ಕಳೆದ 18 ವರ್ಷಗಳಿಂದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಪರೀಕ್ಷಾ ಮಂಡಳಿಯ ಸದಸ್ಯೆಯಾಗಿ, ಧವಳಾ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಸಂಚಾಲಕಿಯಾಗಿ, ರೋವರ್ಸ್, ರೇಂಜರ್ಸ್ ವಿಭಾಗದ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದರು.

By suddi9

Leave a Reply

Your email address will not be published. Required fields are marked *