ಬಂಟ್ವಾಳ :ಸಾಮಾಜಿಕ ಚಟುವಟಿಕೆಗಳಲ್ಲಿ ಸಂಘ ಸಂಸ್ಥೆ ಗಳು ಕೈಜೋಡಿಸಿದಾಗ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದ್ದಾರೆ.ತಾಲೂಕಿನ ರಾಯಿ ಶ್ರೀಯಾ ಗಾರ್ಡನ್ ನಲ್ಲಿ “ನಮ್ಮ ಜವನೆರ್ ಸೇವಾ ಟ್ರಸ್ಟ್”  ವಾರ್ಷಿಕೋತ್ಸವ ಪ್ರಯುಕ್ತ  ನಡೆದ ಅರೋಗ್ಯ ಮತ್ತು ರಕ್ತದಾನ ಶಿಬಿರ ಸಹಿತ ಅಂಚೆ  ಜನಸಂಪರ್ಕ ಅಭಿಯಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.


ರಾಯಿ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ಡಿ. ರಾಮಚಂದ್ರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ರೋಟರಿ ಕ್ಲಬ್ ಸಹಿತ ವಿವಿಧ ಸಂಘ ಸಂಸ್ಥೆ ಗಳ ಸಹಾಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಮೂಡುಬಿದ್ರೆ ಆಳ್ವಾಸ್ ಹೆಲ್ತ್ ಸೆಂಟರ್ ಮತ್ತು ಮಂಗಳೂರು ಎ. ಜೆ. ಆಸ್ಪತ್ರೆ ವೈದ್ಯರ ತಂಡ ಭಾಗವಹಿಸಿದ್ದರು.


ಡಾ .ಅರುಣ್ ಶೆಟ್ಟಿ ಮೂಡುಬಿದ್ರೆ, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷೆಗೀತಾ ಪಿ. ಬಲ್ಲಾಳ್, ಸಿದ್ದಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,ಅರಳ ನವಶಕ್ತಿ ಯುವಕ ಮಂಡಲ ಅಧ್ಯಕ್ಷ ಸುನಿಲ್ ಶೆಟ್ಟಿ ಅರಳ, ಅರ್ಚಕ ದಿನೇಶ್ ಭಟ್ ದೈಲ, ಗುತ್ತಿಗೆದಾರ ರಾಜೇಶ್ ಗೋವಿಂದ ಬೆಟ್ಟ, ಗೋಪಾಲಕೃಷ್ಣ ಬಿ. ಆರ್. ಮಂಗಳೂರು, ಉಮೇಶ್ ಗೌಡ ಮೂಡುಬಿದ್ರೆ, ಪಿಡಿಒ ಧರ್ಮರಾಜ್ ದಡ್ಡು ಮಾತನಾಡಿದರು.


ಬಿಜೆಪಿ ಮುಖಂಡ ಸುದರ್ಶನ್ ಬಜ, ಗ್ರಾ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು,  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಮೀಯಾಲು, ಸಿದ್ಧಕಟ್ಟೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮೈಕಲ್ ಡಿಕೊಸ್ತ, ರಾಯಿ ಒಕ್ಕಲಿಗ ಸಂಘ ಅಧ್ಯಕ್ಷ ವಸಂತ ಗೌಡ ಮುದ್ದಾಜೆ, ಉದ್ಯಮಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸಿದ್ಧಕಟ್ಟೆ ಮೂತರ್ೆದಾರ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಕೊಯಿಲ, ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಶಿವನಗರ, ಗ್ರಾ. ಪಂ. ಮಾಜಿ ಸದಸ್ಯ ರಾಘವ ಅಮೀನ್ ಮತ್ತಿತರರು ಇದ್ದರು. 

By Suddi9