ಬಂಟ್ವಾಳ: ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ೬೨೩ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾಳೆ.
ಇವರು ಮೊಡಂಕಾಪು ಗಾಂಧೋಡಿ ನಿವಾಸಿ ಅವಿಲ್ ಲೂವಿಸ್ ಹಾಗೂ ಲವೀನಾ ಡಿಸೋಜ ದಂಪತಿಯ ಪುತ್ರಿ. ಪರೀಕ್ಷೆಗೆ ಉತ್ತಮ ಅಭ್ಯಾಸ ಮಾಡಿದ್ದು, ಲಾಕ್ಡೌನ್ ವೇಳೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿದ್ದೆ. ಮುಂದೆ ಉಪನ್ಯಾಸಕಿಯಾಗುವ ಗುರಿ ಹೊಂದಿದ್ದೇನೆ ಎಂದು ಅವ್ರಿಲ್ ಲೀವಾ ಲೂವಿಸ್ ಅಭಿಪ್ರಾಯಿಸಿದ್ದಾರೆ.
