ಎಸ್ ವಿ ಎಸ್ ದೇವಳ ಶಾಲೆಗೆ ಪ್ರಥಮ
ಬಂಟ್ವಾಳ: ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಂಟ್ವಾಳ ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಫಲಿತಾಂಶ ಬಂದಿದ್ದು,ಸುಧೀಕ್ಷಾ ಎಸ್. ಕುಲಾಲ್ 625ರಲ್ಲಿ 605 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಶಾಲೆಗೆ ಪ್ರಥಮ ಸ್ಥಾನ ಪಡೆದಿರುವ ಸುಧೀಕ್ಷಾಳಿಗೆ ಶಾಲಾ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯರಾದ ರೋಶನಿ ತಾವ್ರೋ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದೆ.ಈಕೆ ಬಂಟ್ವಾಳ ಸಮೀಪದ ನಾವೂರು ಸುರೇಶ್ ಕುಲಾಲ್ ಮತ್ತು ದಿವ್ಯಲತಾ ಅವರ ಪುತ್ರಿಯಾಗಿದ್ದಾಳೆ.