ಬಂಟ್ವಾಳ:ಇಲ್ಲಿನ ಅಗ್ರಾರ್ ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ -ರಕ್ಷಕ ಸಂಘದ ಸಭೆ ನಡೆಯಿತು. ಶಿಕ್ಷಕ ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷೆ  ಶರಲ್ ನೊರೋನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಧರ್ಮಗುರು ಎಡ್ವಡ್೯ ರಾಡ್ರಿಗಸ್ ಎಸ್.ಜೆ. ಮಾಹಿತಿ ನೀಡಿದರು.  
ಶಾಲಾ ಸಂಚಾಲಕ ಧರ್ಮಗುರು ಡಾ. ಪೀಟರ್ ಡಿಸೋಜ, ಪಾಲನಾ ಮಂಡಳಿ ಉಪಾಧ್ಯಕ್ಷ ಓಡ್ರಿನ್ ಡಿಸೋಜ ಶುಭ ಹಾರೈಸಿದರು.
ಇದೇ ವೇಳೆ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಪ್ರಿನೀತ್ ರಾಡ್ರಿಗಸ್ ಆಯ್ಕೆಗೊಂಡರು. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 617 ಅಂಕ ಗಳಿಸಿ ರಾಜ್ಯದಲ್ಲಿ ಒಂಬತ್ತನೇ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಲೀಶಾ ಲೋಬೋ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಭಗಿನಿ ಪ್ರಶಾಂತಿ ಮೋನಿಸ್ ಪ್ರಾಸ್ತಾವಿಕ ಮಾತನಾಡಿದರು. ಸಹ ಶಿಕ್ಷಕಿ ವಿನಿತ ಡಿಸಿಲ್ವ ವರದಿ ವಾಚಿಸಿದರು. ಸಹಶಿಕ್ಷಕಿ ಸುಜಾತ ಸ್ವಾಗತಿಸಿ, ಸುನಿತಾ ಬ್ಯಾಪ್ಟಿಸ್ಟ್ ವಂದಿಸಿದರು. ಯಶೋಧ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *