ಕುಪ್ಪೆಪದವು: ಹಿಂದೂ ಜಾಗರಣಾ ವೇದಿಕೆಯ ಇರುವೈಲು ಶ್ರೀದುರ್ಗಾಪರಮೇಶ್ವರಿ ಘಟಕದ ವತಿಯಿಂದ ಗಿಡ ನೆಡುವ ‘ವೃಕ್ಷ ಜಾಗರಣ’ ಕಾರ್ಯಕ್ರಮವು ಭಾನುವಾರ ಇರುವೈಲಿನಲ್ಲಿ ನಡೆಯಿತು.ಮುಖಂಡರಾದರಾದ ಪೂವಪ್ಪ ಸಾಲ್ಯಾನ್ ಇರುವೈಲು ಅವರು ಗಿಡಗಳನ್ನು ಕಾರ್ಯಕರ್ತರಿಗೆ ಹಸ್ತಾoತರಿಸಿದರು.
ಜಿಲ್ಲಾ ಸಂಪರ್ಕ್ ಪ್ರಮುಖ್ ಹರೀಶ್ ಮಟ್ಟಿ, ವೇದಿಕೆಯ ಮೂಡಬಿದ್ರಿ ತಾಲೂಕು ಅಧ್ಯಕ್ಷ ಸಮಿತ್ ರಾಜ್ ಧರೆಗುಡ್ಡೆ, ಮುಖಂಡರಾದ ರಾಮ್ ಕುಮಾರ್ ಮಾರ್ನಾಡು, ಇರುವೈಲು ಘಟಕದ ಅಧ್ಯಕ್ಷ ಜನಾರ್ಧನ ದೇವರಗುಡ್ಡೆ, ಸುನೀಲ್ ಇರುವೈಲು ಹಾಗು ಪದಾಧಿಕಾರಿಗಳು, ಕಾರ್ಯಕರ್ತರು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
