ಬಂಟ್ವಾಳ : ಕೋವಿಡ್ -19 ಗೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳದ 85 ವರ್ಷ ಪ್ರಾಯದ ವೃದ್ದರೊಬ್ಬರು ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಜೆಯ ವೇಳೆಗೆ ಮಾರಿಪಳ್ಳ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಧಪನ ಕಾರ್ಯವನ್ನು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ದ.ಕ ಜಿಲ್ಲಾ SKSSF ವಿಖಾಯ ತಂಡದ ಚೇರ್ ಮ್ಯಾನ್ ಸೈಯದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ರವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.83fdfbe3-fdac-4031-814f-da18c95b9809

ದ.ಕ ಜಿಲ್ಲಾ ವಿಖಾಯ ತಂಡದ ಕನ್ವಿನರ್ ಆಸೀಫ್ ಕಬಕ, ಸದಸ್ಯರಾದ ಮುಸ್ತಫಾ ಕಟ್ಟದಪಡ್ಪು, ಫರಾಝ್ ಕುದ್ರೋಳಿ, ಶಮೀರ್ ಹೂಹಾಕುವಕಲ್ಲು, ಅಬೂಬಕ್ಕರ್, ರಮ್ಲಾನ್ ತಾಳಿಪಡ್ಪು, ಅಹ್ಮದ್ ಬಾವ ಅಜ್ಜಿನಡ್ಕ, ಶಾಕೀರ್ ಮಿತ್ತಬೈಲ್, ಶಬೀರ್ ತಾಳಿಪಡ್ಪು, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ರವರು ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಬದ್ರಿಯ್ಯೀನ್ ಜುಮಾ ಮಸೀದಿ ಉಪಾಧ್ಯಕ್ಷ ರಮ್ಲಾನ್ ಮಾರಿಪಳ್ಳ, ಫರಂಗಿಪೇಟೆ ಕ್ಲಸ್ಟರ್ ವಿಖಾಯ ಪದಾಧಿಕಾರಿಗಳಾದ MKB ಮಾರಿಪಳ್ಳ, ಇಮ್ರಾನ್ ಮಾರಿಪಳ್ಳ, ಮುಸ್ತಾಕ್ ಜಲಾಲಿಯ್ಯಾ ನಗರ, ಇನ್ಸಾದ್ ಮಾರಿಪಳ್ಳ, ಲತೀಫ್ ಮಲಾರ್, ಫಾಝೀಲ್ ಪೇರಿಮಾರ್, ಮುಖ್ತಾರ್ ಅಮ್ಮೆಮಾರ್, ಶರೀಫ್ ಸುಜೀರ್, ಜುಬೇರ್ ಮಾರಿಪಳ್ಳ, ಇಸ್ಮಾಯಿಲ್ ಮಾರಿಪಳ್ಳ, ರಮ್ಲಾನ್ (ಚಾಬು) ಮಾರಿಪಳ್ಳ ಪಾಡಿ, ಜಮಾತ್ ಕಮಿಟಿಯ ಗಣ್ಯರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.

ಸ್ಥಳೀಯ ಮಸೀದಿಯ ಇಮಾಮ್ ಮಯ್ಯತ್ ನಮಾಜ್ ಹಾಗೂ ತಲ್ಖೀನ್ ಪಾರಯಣ, ದುಆ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *