Published On: Fri, Jul 10th, 2020

ಫರಂಗಿಪೇಟೆ ಪರಿಸರದಲ್ಲಿ 14 ದಿನ ಮಧ್ಯಾಹ್ನದ ಬಳಿಕ ಬಂದ್

ಬಂಟ್ವಾಳ : ತಾಲೂಕಿನ ಪುದು  ಗ್ರಾಮದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ( ಜುಲೈ 10)  ಹದಿನಾಲ್ಕು ದಿನಗಳ ಕಾಲ ಮಧ್ಯಾಹ್ನ 2 ಗಂಟೆಯ ಬಳಿಕ ವ್ಯಾಪಾರಸ್ಥರು  ಸ್ವಯಂ ಪ್ರೇರಿತ ಬಂದ್ ಗೆ ನಿರ್ಧರಿಸಿದ್ದು, ಮೊದಲದಿನವೇ ಬಂದ್ ಯಶಸ್ವಿಯಾಗಿದೆ.  ಮದ್ಯಾಹ್ನ 2 ಗಂಟೆಯಾಗುತ್ತಿದ್ದಂತೆ ಎಲ್ಲಾ ವ್ಯಾಪಾರಸ್ಥರು ತಮ್ನ ಅಂಗಡಿ ಮುಂಗಟ್ಟು ಬಂದ್ ಗೊಳಿಸಿದ್ದಲ್ಲದೆ ರಿಕ್ಷಾ,ಗೂಡ್ಸ್ ಟೆಂಪೋ,ಟೂರಿಸ್ಟ್ ಕಾರುಗಳು ಸಂಚಾರ ಸ್ಥಗಿತಗೊಳಿಸಿ ಚಾಲಕರು ತಮ್ಮ ಮನೆಯತ್ತ ತೆರಳಿದರು.ಪರಿಣಾಮ ಸದಾ ಗಿಜಿಗುಡುತ್ತಿದ್ದ ಪರಂಗಿಪೇಟೆ ಪರಿಸರ ಮಧ್ಯಾಹ್ನದ ಬಳಿಕ  ಜನಸಂಚಾರವಿಲ್ಲದೆ ಬಿಕೋ ಅನಿಸಿದೆ. IMG-20200710-WA0046

ಉತ್ತಮ   ಸ್ಪಂದನೆ :

ಈ ಬಗ್ಗೆ  ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪರಂಗಿಪೇಟೆ ಸಹಿತ ಪುದು ಗ್ರಾಮದಲ್ಲಿ ಮಧ್ಯಾಹ್ನದ ಬಳಿಕದ ಬಂದ್ ಗೆ ಮೊದಲ ದಿನ ಗ್ರಾಮದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಗ್ರಾಮದ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಹಾಗೆಯೇ ಆಟೋ ರಿಕ್ಷಾ, ಗೂಡ್ಸ್ ವಾಹನ, ಟೂರಿಸ್ಟ್ ಕಾರುಗಳ ಚಾಲಕರೂ ಬೆಂಬಲ ನೀಡಿದ್ದಾರೆ ಎಂದರು. ಪಂಚಾಯತ್ ನ ವಿಶೇಷ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು,
ಗ್ರಾಮದಲ್ಲಿ ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಂದ್ ಗೆ ಸರ್ವರು ಬೆಂಬಲ ವ್ಯಕ್ತಪಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ‌. ಅಂಗಡಿ ಮಾಲಕರು, ಬಾಡಿಗೆ ವಾಹನಗಳ ಚಾಲಕರು ಆರ್ಥಿಕ ಮುಗ್ಗಟ್ಟಿನ ನಡುವೆಯೂ ಬಂದ್ ಮಾಡಿದ್ದಾರೆ. ಗ್ರಾಮದ ಜನರು ಇದನ್ನು ಅರ್ಥಹಿಸಿಕೊಂಡು, ಯಾರೂ ಅನಗತ್ಯವಾಗಿ ಮನೆಯಿಂದ ಹೊರ ಬಾರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಪಾಡುವುದು, ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿರುವ ಅವರು ಎಲ್ಲರ ಸಹಕಾರದಿಂದ ಮಾತ್ರ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾಧ್ಯ ಎಂದಿದ್ದಾರೆ.
ಮಸೀದಿಗಳು ಬಂದ್ :
ಪುದು ಗ್ರಾಮದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಮಸೀದಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಫರಂಗಿಪೇಟೆ, ಮಾರಿಪಳ್ಳ, ಮಲ್ಲಿ, ಸುಜೀರ್, ಪೇರಿಮಾರ್, ಹತ್ತನೇ ಮೈಲುಗಲ್ಲು, ಕುಂಜತ್ಕಲ, ಅಮ್ಮೆಮಾರ್, ಕುಂಪನಮಜಲು ಮಸೀದಿಗಳನ್ನು ಬಂದ್ ಮಾಡಲಾಗಿದೆ.

16 ಮಂದಿಗೆ ಸೋಂಕು:

ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿರುವ ಎರಡು ಕುಟುಂಬದ 16 ಮಂದಿಗೆ ಶುಕ್ರವಾರ ಕೊರೋನ ಪಾಸಿಟಿವ್ ದೃಢಪಟ್ಟಿದೆ.ಇತ್ತೀಚಿಗೆ ಮಾರಿಪಳ್ಳದ ವ್ಯಕ್ತಿಯೊಬ್ಬರು ಅಪಘಾತದಿಂದ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಅವರ ಗಂಟಲ ದ್ರವದ ಮಾದರಿಯನ್ನು ಕೋವಿಡ್ – 19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆದರೆ ಅವರ ಮನೆಯ ಹಾಗೂ ಪತ್ನಿಯ ಸಹೋದರಿಯ ಮನೆಯವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಬಂದ ವರದಿಯಲ್ಲಿ ಈ ಎರಡು ಮನೆಯ ಒಟ್ಟು 12 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ‌.ಅಲ್ಲದೆ ಮಾರಿಪಳ್ಳ ಪರಿಸರದ ಮತ್ತೊಂದು ಮನೆಯ ವ್ಯಕ್ತಿಯೊಬ್ಬರಿಗೆ ಕೆಲವು ದಿನಗಳ ಹಿಂದೆ ಕೊರೋನ ಪಾಸಿಟಿವ್ ಆಗಿತ್ತು. ಅವರ ಮನೆಯ ನಾಲ್ವರಿಗೆ ಕೊರೋನ ಸೋಂಕು ತಗುಲಿರುವುದು  ದೃಢಪಟ್ಟಿದೆ. ‌ಗ್ರಾಮದಲ್ಲಿ ಒಟ್ಟು 26 ಮಂದಿಗೆ ಕೊರೋನ ಸೋಂಕು ಪಾಸಿಟಿವ್ ಅಗಿದ್ದು ಗ್ರಾಮದಲ್ಲಿ ಅತಂಕ ಮನೆ ಮಾಡಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter