ನವದೆಹಲಿ: ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಹೃತಿಕ್ ರೋಷನ್-ಕತ್ರಿನಾ ಕೈಫ್ ಅಭಿನಯದ “ಬ್ಯಾಂಗ್ ಬ್ಯಾಂಗ್” ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಐದೇ ದಿನದಲ್ಲಿ ಬ್ಯಾಂಗ್ ಬ್ಯಾಂಗ್ ದ್ವಿಶತಕ ಭಾರಿಸಿದೆ. ಅದರ ಗಳಿಕೆ 201.51 ಕೋಟಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
“ಬ್ಯಾಂಗ್ ಬ್ಯಾಂಗ್” ಚಿತ್ರ ಈ ಐದು ದಿನದಲ್ಲಿ ಭಾರತದ ಥಿಯೇಟರುಗಳಿಂದಲೇ 156.41 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 45.10 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆಯಂತೆ.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ, ಸಿದ್ಧಾರ್ಥ್ ಆನಂದ್ ನಿರ್ದೇಶನದ “ಬ್ಯಾಂಗ್ ಬ್ಯಾಂಗ್” ಚಿತ್ರ 140 ಕೋಟಿ ರೂ. ಬಜೆಟ್’ನಲ್ಲಿ ತಯಾರಾಗಿದೆ. ಮಾಧ್ಯಮಗಳಲ್ಲಿ ಮಿಶ್ರ ವಿಮರ್ಶೆಗಳು ಬಂದರೂ ಬಾಕ್ಸ್ ಆಫೀಸ್’ನಲ್ಲಿ ಚಿತ್ರ ಅದ್ಭುತ ಸಾಧನೆ ಮಾಡಿರುವುದಂತೂ ಹೌದು.

