ಹೈದರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ನ ಉದಯನ್ಮೋಖ ನಟಿ ಶ್ವೇತಾ ಬಸು ನಾಂಪಲ್ಲಿಯ ಸೆಷನ್ಸ್ ಕೋರ್ಟ್​ ಅನುಮತಿ ನೀಡಿದ ಮೇರೆಗೆ ಗುರುವಾರ ಬೆಳಗ್ಗೆ ಶ್ವೇತಾ ಬಸು ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

shwetha basu

ಕೆಳಗಿನ ಎರ್ರಮಂಜಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶ್ವೇತಾ ಬಸು ಅವರ ತಾಯಿ ನಾಂಪಲ್ಲಿ ಕೋರ್ಟ್ನ​ ಮೊರೆ ಹೋಗಿದ್ದರು. ಆರು ತಿಂಗಳ ಕಾಲ ಶ್ವೇತಾ ಬಸು ಮನಪರಿವರ್ತನಾ ಕೇಂದ್ರದಲ್ಲೇ ಇದ್ದರೆ ಅವರ ಸಿನಿಮಾ ವೃತ್ತಿ ಬದುಕು ಸಂಪೂರ್ಣ ತಳಕಚ್ಚುತ್ತದೆ ಎಂದು ಅವರ ತಾಯಿ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ, ತಮ್ಮ ಮಗಳನ್ನು ಬಲಿಪಶುವನ್ನಾಗಿ ಮಾಡಿದ್ದು, ಆಕೆಯನ್ನು ಇಷ್ಟು ದೀರ್ಘಾವಧಿಯವರೆಗೆ ಸಾಂತ್ವನ ಕೇಂದ್ರದಲ್ಲಿ ಇರಿಸುವುದು ಮೂಲಭೂತ ಹಕ್ಕನ್ನೇ ಕಸಿದುಕೊಂಡಂತೆ ಎಂದು ವಾದಿಸಿದ್ದರು. ಅವರ ಅರ್ಜಿ ಪುರಸ್ಕರಿಸಿದ ನಾಂಪಲ್ಲಿ ಕೋರ್ಟ್​, ಶ್ವೇತಾಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಹಾಗಾಗಿ ಇಂದು ಶ್ವೇತಾ ಬಸು, ಮನಪರಿವರ್ತನಾ ಕೇಂದ್ರದಿಂದ ಬಿಡುಗಡೆಯಾಗಿ ತನ್ನ ತಾಯಿಯೊಂದಿಗೆ ವಾಸಿಸಲಿದ್ದಾರೆ..

ಎರಡು ತಿಂಗಳ ಹಿಂದೆ ಹೈದರಾಬಾದ್’ನ ಪ್ರತಿಷ್ಠಿತ ಪ್ರದೇಶದ ಹೋಟೆಲ್’ಗೆ ಪೊಲೀಸರ ದಾಳಿ ಮಾಡಿದಾಗ ನಟಿ ಶ್ವೇತಾ ಬಸು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದು ರೆಡ್’ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಳು. ಕೆಳಹಂತದ ನ್ಯಾಯಾಲಯವು ಈಕೆಯನ್ನ 6 ತಿಂಗಳ ಕಾಲ ಶಿಕ್ಷೆ ವಿಧಿಸಿ ಮನಃಪರಿವರ್ತನಾ ಕೇಂದ್ರಕ್ಕೆ ಕಳುಹಿಸಲು ಆದೇಶ ಹೊರಡಿಸಿತ್ತು.

By suddi9

Leave a Reply

Your email address will not be published. Required fields are marked *