ದೆಹಲಿ: ಕ್ವೀನ್‌’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿಯರಾದ ಕಂಗನಾ ರನೋಟ್‌ ಮತ್ತು ಲೀಸಾ ಹೇಡನ್‌ ಇಬ್ಬರೂ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವ ಕುರಿತಂತೆ ಭಿನ್ನವಾಗಿ ಮಾತನಾಡಿದ್ದಾರೆ.

‘ಕ್ವೀನ್’ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ನಟಿ ಕಂಗನಾ ರನೋಟ್‌ ಈಗ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ‘ನನ್ನ ಸಂಭಾವನೆಯನ್ನು ಶೇ 50ರಷ್ಟು ಹೆಚ್ಚಿಸಿಕೊಂಡಿದ್ದೇನೆ’ ಎನ್ನುವ ಕಂಗನಾ 2016ರವರೆಗೆ ಬ್ಯುಸಿಯಂತೆ.

kangana

lisa

ನಿರ್ಮಾಪಕರು ಮತ್ತು ನಿರ್ದೇಶಕರು ಕಂಗನಾ ಅವರ ಡೇಟ್ಸ್‌ ಪಡೆಯಲು ಆಕೆಯ ಮನೆಯ ಮುಂದೆ ಸಾಲು ಹಚ್ಚಿ ನಿಂತಿದ್ದಾರಂತೆ. ಈ ಬಗ್ಗೆ ಕಂಗನಾ ಪುಳಕಗೊಂಡಿದ್ದಾರೆ. ‘ವೈಯಕ್ತಿಕವಾಗಿ ನನಗೆ ಇದೊಂದು ಅಚ್ಚರಿಯ ಸಂಗತಿ. ನನ್ನ ಡೇಟ್ಸ್‌ಗಾಗಿ ಅನೇಕ ನಿರ್ಮಾಪಕರು, ನಿರ್ದೇಶಕರು ಮನೆ ಮುಂದೆ ಕಾದು ನಿಂತಿದ್ದರು. ಒಂದು ವರ್ಷದ ನಂತರವಾದರೂ ಸರಿ ನಿಮ್ಮ ಡೇಟ್ಸ್‌ ಕೊಡಿ ಎಂಬ ಅವರ ಕೋರಿಕೆ ನನ್ನಲ್ಲಿ ಹೊಸ ಪುಳಕ ಮೂಡಿಸಿದೆ. ನನ್ನ ಜೀವನದಲ್ಲಿ ಇಂತಹದ್ದೊಂದು ವಿಶೇಷ ಸಂದರ್ಭ ಎದುರಾಗಿದ್ದು ಇದೇ ಮೊದಲು. ಹಾಗಾಗಿ, 2016ರವರೆಗೆ ನನ್ನೆಲ್ಲಾ ಡೇಟ್ಸ್‌ಗಳನ್ನು ಕೊಟ್ಟುಬಿಟ್ಟಿದ್ದೇನೆ’  ಎನ್ನುತ್ತಾರೆ ಕಂಗನಾ.

ಬಾಲಿವುಡ್‌ನಲ್ಲಿ ಈಗ ಮಹಿಳಾ ಪ್ರಧಾನ ಚಿತ್ರಗಳು ಹೆಸರು ಮತ್ತು ಹಣ ಎರಡನ್ನೂ ಮಾಡುತ್ತಿವೆ. ಈ ಕಾರಣದಿಂದಾಗಿ ನಟಿಯರು ಸಹ ನಾಯಕ ನಟರಂತೆ ಹೆಚ್ಚು ಸಂಭಾವನೆಯನ್ನು ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎಂಬ ಮಾತಿಗೆ ಕಂಗನಾ ಭಿನ್ನವಾಗಿ ಉತ್ತರಿಸುತ್ತಾರೆ. ‘ಇತರರು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅದೇರೀತಿ, ಸಂಭಾವನೆ ವಿಚಾರದಲ್ಲಿ ನನ್ನನ್ನು ನಾನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದೂ ಇಲ್ಲ. ‘ಕ್ವೀನ್‌’ ಚಿತ್ರ ಗೆದ್ದ ನಂತರ ನನ್ನ ಸಂಭಾವನೆಯನ್ನು ಶೇ 50 ಹೆಚ್ಚಿಸಿಕೊಂಡಿದ್ದೇನೆ. ಮಹಿಳಾ ಪ್ರಧಾನ ಚಿತ್ರಗಳು ಗೆಲ್ಲುತ್ತಿವೆ ಎಂದ ಮಾತ್ರಕ್ಕೆ ದೊಡ್ಡ ಸ್ಟಾರ್‌ಗಳು ಪಡೆಯುವಷ್ಟು ಸಂಭಾವನೆಯನ್ನು ನಟಿಯರು ಪಡೆದುಕೊಳ್ಳುತ್ತಾರೆ ಎಂಬುದು ಸುಳ್ಳು.  ಉದಾಹರಣೆಗೆ, ಅಮೀರ್‌ ಖಾನ್‌ ಅವರು ಕಳೆದ 25 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಹಾಗಂತ ನಾನು ಅಮೀರ್‌ ಖಾನ್‌ ಪಡೆಯುವಷ್ಟು ಸಂಭಾವನೆ ಪಡೆಯಲು ಸಾಧ್ಯವೇ? ಅದನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ನನ್ನ ಪ್ರಕಾರ ಪ್ರತಿಯೊಬ್ಬ ಕಲಾವಿದರಿಗೂ ಅವರದ್ದೇ ಆದ ಸ್ವಂತದ್ದೊಂದು ಜರ್ನಿ ಇರುತ್ತದೆ’ ಎನ್ನುತ್ತಾರೆ 27 ವರ್ಷದ ಕಂಗನಾ ರನೋಟ್‌.

By suddi9

Leave a Reply

Your email address will not be published. Required fields are marked *