ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿ ಬಾಲಿಒವುಡ್‘ನ ಖ್ಯಾತ ನಟ ಹೃತಿಕ್ ರೋಶನ್ ಮೇಲೆ ಹಲ್ಲೆ ನಡೆದಿದೆ. ‘ಬ್ಯಾಂಗ್ ಬ್ಯಾಂಗ್’ ಚಿತ್ರದ ಬಿಡುಗಡೆಗೂ ಒಂದು ದಿನ ಮುಂಚೆ ಅಂದರೆ ಅಕ್ಟೋಬರ್ 1 ರಾತ್ರಿ 11.30ರ ಸುಮಾರಿಗೆ ಜುಹುವಿನ ಮಲ್ಟಿಪ್ಲೆಕ್ಸ್‘ನಲ್ಲಿ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭ ಹೃತಿಕ್ ಆಗಮಿಸುತ್ತಿದ್ದಂತೆ ಗುಂಪಿನಲ್ಲಿದ್ದ ಒಬ್ಬ ಅಪರಿಚಿತ ಯುವಕ ಹಿಂದಿನಿಂದ ಹೃತಿಕ್ ಮೇಲೆ ಜಿಗಿದಿದ್ದಾನೆ. ಜೊತೆಯಲ್ಲಿದ್ದ ಬಾಡಿಗಾರ್ಡ್‘ಗಳನ್ನ ನೂಕಿದ್ದಾನೆ. ಹೃತಿಕ್ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಕೂಡಲೇ ಎದ್ದು ಬಂದ ಬಾಡಿಗಾರ್ಡ್ ಮಯೂರ್ ಅಪರಿಚಿತ ಯುವಕನನ್ನು ಎಳೆದು ಒಯ್ದಿದ್ದಾನೆ. ಬಳಿಕ ಹೃತಿಕ್ ಆದೇಶದ ಹಿನ್ನೆಲೆಯಲ್ಲಿ ಯುವಕನನ್ನ ಬಿಟ್ಟು ಕಳುಹಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೃತಿಕ್, ಅಭಿಮಾನಿಗಳು ಒಮ್ಮೊಮ್ಮೆ ಅತಿಯಾದ ಅಭಿಮಾನ ಪ್ರದರ್ಶಿಸುತ್ತಾರೆ ಎಂದು ಹೇಳಿದ್ದಾರೆ.

