ನವದೆಹಲಿ: ಬಾಲಿವುಡ್ ಕ್ಯಾಟ್ ಕತ್ರಿನಾ ನಾಪತ್ತೆಯಾಗಿದ್ದಾಳೆಂದು ಸುದ್ದಿ ಹಬ್ಬಿದೆ. ಒಂದೆಡೆ ಕತ್ರಿನಾ ಕೈಫ್ ವಿದಾಯ ಹೇಳಿದಳು ಎಂಬ ಸುದ್ದಿ ಹಬ್ಬಿದರೆ ಇನ್ನೊಂದೆಡೆ ಅವಕಾಶಗಳ ಕೊರತೆಯಾಗಿ ಮನೆಮೂಲೆ ಸೇರಿಕೊಂಡಿದ್ದಾಳೆ ಅಂತ ಸುದ್ದಿ ಹರಡುತ್ತಿದೆ. ಅದಕ್ಕೆ ಪುಷ್ಟಿಕೊಡುವಂತೆ ಕತ್ರಿನಾ ಪಾರ್ಟಿ, ಫೋನು, ಟ್ವಿಟ್ಟರ್ ಎಲ್ಲೆಲ್ಲೂ ಕಾಣುತ್ತಿಲ್ಲ. ಸಾಲು ಸಾಲಾಗಿ ಫ್ಲಾಪು ಕೊಟ್ಟವರೆಲ್ಲ ಎದೆಯುಬ್ಬಿಸಿ ಪೋಸು ಕೊಡುತ್ತಿರುವಾಗ ಸ್ಟಾರ್ ನಟರ ಫೇವರಿಟ್ ಕತ್ರಿನಾ ಹೀಗೆ ನಾಪತ್ತೆ ಆಗೋದುಂಟಾ ಎಂದು ಪತ್ತೆ ಹಚ್ಚಲು ಹೊರಟ ಮುಂಬೈ  ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕತ್ರಿನಾಳ ದಿನಚರಿಯ ಸುಳಿವು ಸಿಕ್ಕಿದೆ.

ಕತ್ರಿನಾ ಏಕಕಾಲದಲ್ಲಿ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಬೇಕೆಂದೇ ಮಾಧ್ಯಮದವರಿಗೆ ಸಿಗದಂತೆ ಎಚ್ಚರವಹಿಸಿದ್ದಾಳಂತೆ. ಶೂಟಿಂಗ್ ಪ್ಯಾಕಪ್ ಆಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾಗುವ ಕತ್ರಿನಾ ಸದ್ಯದಲ್ಲಿ ಶೂಟಿಂಗ್ ಬಿಟ್ಟರೆ ಇನ್ನೇನು ಮಾಡುತ್ತಿದ್ದಾಳೆ ಗೊತ್ತೇ?. ಈ ವರ್ಷ ಬಿಡುಗಡೆಯಾಗಿರುವ ಎಲ್ಲ ಹೊಸ ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ನೋಡುತ್ತಿದ್ದಾಳಂತೆ. ಏಕ್ ವಿಲನ್‌ಸ ಆಶಿಕಿ2, ಕಿಕ್ (ಮೂರು ಬಾರಿ) ಸೇರಿದಂತೆ ಸುಮಾರು ನಲವತ್ತು ಚಿತ್ರ ನೋಡಿ ಮುಗಿಸಿರೋ ಈಕೆ ಹೊಸ ನಟಿಯರ ಸ್ಟೈಲು, ಮ್ಯಾನರಿಸಮ್ಸ್, ಫಿಗರ್ ಎಲ್ಲವನ್ನೂ ಗಮನಿಸಿ ಅವರೊಂದಿಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾಳಂತೆ. ಇದಲ್ಲವೇ ವೃತ್ತಿಪರತೆ ಅಂದ್ರೆ!

katrina1

katrina2

katrina3

katrina4

katrina5

 

By suddi9

Leave a Reply

Your email address will not be published. Required fields are marked *