ಬಜಪೆ :ವಿಶ್ವ ಗಾಣಿಗರ ಚಾವಡಿ ಸೋಶಿಯಲ್ ಮೀಡಿಯಾ ತಂಡ ವತಿಯಿಂದ ನಡೆಯಲಿರುವ ಸಹಸ್ರ ಪುಸ್ತಕ ವಿತರಣೆ ಅಭಿಯಾನಕ್ಕೆ, ಎಡಪದವು ಕೊರ್ಡೆಲ್ ನಲ್ಲಿ ಎಡಪದವು ಗಾಣಿಗರ ಸಂಘ ಅಧ್ಯಕ್ಷ, ಸಫಲ ತ್ರೈಮಾಸಿಕ ಪತ್ರಿಕೆ ಸಂಪಾದಕ ಭಾಸ್ಕರ ಎಡಪದವು ಆದಿತ್ಯವಾರ ಚಾಲನೆ ನೀಡಿದರು. ಈ ಸಂದರ್ಭ 28 ಪುಸ್ತಕ ಕಿಟ್ ಗಳನ್ನು ಹಸ್ತಾಂತರಿಸಲಾಯಿತು.

ಮುಂದಿನ ದಿನಗಳಲ್ಲಿ ವಿಶ್ವ ಗಾಣಿಗರ ಚಾವಡಿ ವತಿಯಿಂದ ಗಾಣಿಗ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಜಿಲ್ಲೆಯಾದ್ಯಂತ ಸಹಸ್ರ ಪುಸ್ತಕ ವಿತರಣಾ ಅಭಿಯಾನ ನಡೆಯಲಿದೆ.
ಈ ವೇಳೆ ಮಾತನಾಡಿದ ಭಾಸ್ಕರ್ ಎಡಪದವು, ಮುಂದಿನ ದಿನಗಳಲ್ಲಿ ನಿಮ್ಮಿಂದ ಗಾಣಿಗ ಸಮಾಜದ ಬಡವರಿಗೆ ಸಹಕಾರ ಸಿಗುವಂತಾಗಲಿ, ಮುಂದಿನ ದಿನಗಳಲ್ಲಿ ಮುಂಡ್ಕೂರು, ಮಳಲಿ, ಮೂಡುಬಿದಿರೆ, ಮಂಗಳೂರು, ಉಳ್ಳಾಲ, ಮಂಜೇಶ್ವರ, ತುಪ್ಪೆಕಲ್ಲು, ಬಂಟ್ವಾಳ, ಪುತ್ತೂರು, ಧರ್ಮಸ್ಥಳ, ಬೆಳ್ತಂಗಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮ ಸ್ಥಳೀಯ ಗಾಣಿಗ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಲಿದೆ ಎಂದು ಹೇಳಿದರು. ಹೂವಯ್ಯ ಸಪಲ್ಯ, ಶಿವರಾಜ್ ನಾರ್ಲ ಸೇರಿದಂತೆ ಹಲವಾರು ಹಾಜರಿದ್ದರು.

