ಕೈಕಂಬ: ಅಡ್ಡೂರು ಕಾಂಜೀಲಕೊಡಿ ರೈಡರ್ಸ್ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಕೋವಿಡ್-19 ಎಂಬ ಮಹಾಮಾರಿ ವಿರುದ್ದ ಹೋರಾಡುತ್ತಿರುವ ನಾಗರಿಕರಿಗೆ ಮೇ 8ರಂದು ಶುಕ್ರವಾರ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರೈಡರ್ಸ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುಭಾಶ್ಚಂದ್ರರವರ ಮನೆಯ ವಠಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಧ್ಯಕ್ಷತೆಯನ್ನು ರೈಡರ್ಸ್ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷ ಸುಭಾಶ್ಚಂದ್ರ ಅವರು ವಹಿಸಿದರು.
ಹಾಗೂ ಬದ್ರುಲ್ ಹುದಾ ಜುಮ್ಮಾ ಮಸೀದಿ ಕಾಂಜೀಲಕೊಡಿ ಗೌರವ ಅಧ್ಯಕ್ಷ ಹಾಜಿ M.H ಮೈಯದಿ ಹಾಗೂ ಬದ್ರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ , ಪದ್ಮನಾಭ ಶೆಟ್ಟಿ ಪೊನ್ನೆಲ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೈಡರ್ಸ್ ಫ್ರೆಂಡ್ಸ್ ಕ್ಲಬ್ ಇದರ ಸರ್ವಸದಸ್ಯರು ಇದ್ದರು. ಸುಮಾರು 280 ಮನೆಗಳಿಗೆ ಪ್ರತಿ ಮನೆಗೆ 1 ಲೀ ನಂತೆ ಹಾಲು ವಿತರಿಸಲಾಯಿತು.
ಹಾಲು ವಿತರಣಾ ಕಾರ್ಯಕ್ರಮಕ್ಕೆ ಸ್ಪಂದಿಸಿದ ಊರಿನ ಎಲ್ಲಾ ನಾಗರಿಕರಿಗೆ ರೈಡರ್ಸ್ ಫ್ರೆಂಡ್ಸ್ ಕ್ಲಬ್ ಕಾಂಜಿಲಕೋಡಿ ಇದರ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಅಭಿನಂದಿಸಿದ್ದಾರೆ.
