ಬಜ್ಪೆ : ಕೊರೊನಾ ವೈರಸ್ ಹರಡದಂತೆ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಮತ್ತು ಪೇಟೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಬಜ್ಪೆ ಗ್ರಾಪಂ ಆಡಳಿತವು ಇದೀಗ ಮತ್ತೊಂದು ವಿಶೇಷ ಸುರಕ್ಷಾ ಕ್ರಮ ಜಾರಿಗೆ ತಂದಿದೆ.gur-june-10-bajpe

ಬಜ್ಪೆ ಪೇಟೆಯಲ್ಲಿ ಹಾಗೂ ಒಳಪ್ರದೇಶಗಳಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಉದ್ಯಮಿಗಳು ಪಾಲಿಸಬೇಕಾದ ಕ್ರಮ : ಅಂಗಡಿಗಳೆದುರು ಗ್ರಾಹಕರಿಗೆ ಸಾಮಾಜಿಕ ಅಂತರ ಮೂಡಿಸಬೇಕು, ಸ್ಯಾನಿಟೈಸರ್ ಉಪಯೋಗಿಸಬೇಕು, ಅನವಶ್ಯಕವಾಗಿ ಬಂದವರಿಗೆ ಕೋವಿಡ್-19 ಬಗ್ಗೆ ಸುರಕ್ಷತೆ ನಿಯಮ ತಿಳಿಸಿ ಕಳುಹಿಸುವುದು, ಹಣಕಾಸಿನ ವ್ಯವಹಾರಕ್ಕೆ ಆದಷ್ಟು ಗೂಗಲ್-ಪೇ, ಫೋನ್-ಪೇ ಮೊದಲಾದ ಆಧುನಿಕ ಕ್ರಮ ಅನುಸರಿಸುವುದು, `ಕ್ವಾರೆಂಟೈನ್’-ಕೈಗೆ ಸೀಲ್ ಹಾಕಿದವರು ಕಂಡು ಬಂದರೆ ತಕ್ಷಣ ಸೂಚಿತ ದೂರವಾಣಿಗಳಿಗೆ ಕರೆ ಮಾಡಿ ತಿಳಿಸಬೇಕು ಹಾಗೂ ಅಂಗಡಿಯೊಳಗೆ ಗ್ರಾಹಕರಿಗೆ ಪ್ರವೇಶ ನಿಷೇಧಿಸುವುದು.

ಗ್ರಾಹಕರು ಪಾಲಿಸಬೇಕಾದ ಸುರಕ್ಷತಾ ಕ್ರಮಗಳು :

ಸಾಮಾಜಿಕ ಅಂತರಕ್ಕೆ ಬೆಲೆ ಕೊಡಬೇಕು, ಮಾಸ್ಕ್ ಧರಿಸಬೇಕು, ಕೈಗೆ ಸೀಲ್ ಹಾಕಿದವರು ಹೊರಗಡೆ ವ್ಯವಹಾರ ನಡೆಸಕೂಡದು, ತಪ್ಪಿದಲ್ಲಿ ಕಾನೂನು ಕ್ರಮ ಜರುಗಲಿದೆ. ಹೊರರಾಜ್ಯಗಳಿಂದ ಬಂದವರ ಬಗ್ಗೆ ಪಂಚಾಯತ್‍ಗೆ ಮಾಹಿತಿ ನೀಡಿ, ಮನೆಯಲ್ಲೂ ಸ್ಯಾನಿಟೈಸರ್ ಬಳಸಿಕೊಳ್ಳಿ ಎಂಬಿತ್ಯಾದಿ ಎಚ್ಚರಿಕೆ ನೀಡಲಾದ ಸ್ಟಿಕ್ಕರುಗಳನ್ನು ಬಜ್ಪೆ ಪೇಟೆಯ ಪ್ರತಿಯೊಂದು ಅಂಗಡಿಗಳಿಗೆ ಅಂಟಿಸಲಾಗಿದೆ. ಬಜ್ಪೆ ಗ್ರಾಪಂ : 0824/2252418, ಪಿಡಿಒ: 9480862292, ಪ್ರಾಥಮಿಕ ಆರೋಗ್ಯ ಕೇಂದ್ರ : 0824/2252620,ವೈದ್ಯಾಧಿಕಾರಿ : 9986797304, ಬಜ್ಪೆ ಪೊಲೀಸ್ ಠಾಣೆ : 0824/2220531.

“ತನಗೆ ಕೊರೊನಾ ತಗುಲಲು ಸಾಧ್ಯವಿಲ್ಲ ಎಂದು ಹೇಳಬೇಡಿ. ಸೋಂಕು ತಗುಲಿದ ನಂತರವೇ ಪರಿಸ್ಥಿತಿಯ ಗಂಭೀರತೆ ಅರಿವಿಗೆ ಬರುವುದು. ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗಸೂಚಿಗಳೊಂದಿಗೆ ವೈಯಕ್ತಿಕ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಒಳಿತು” ಎಂದು ಬಜ್ಪೆ ಗ್ರಾಪಂ ಪಿಡಿಒ ಸಾಯೀಸ್ ಚೌಟ ಹೇಳಿದ್ದಾರೆ

By suddi9

Leave a Reply

Your email address will not be published. Required fields are marked *