ಬಂಟ್ವಾಳ: ಪಡಿತರ ಚೀಟಿ ಇಲ್ಲದ ಅಶಕ್ತ ಬಡಕುಟುಂಬಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ವಯಕ್ತಿಕ ನೆಲೆಯಲ್ಲಿ ನೀಡಲಾಗುವ ಆಹಾರದ ಕಿಟ್ ನ್ನು ವಿವಿಧಗ್ರಾಮಗಳಲ್ಲಿ ಬುಧವಾರ ವಿತರಿಸಲಾಯಿತು. 
ಬೆಂಜನಪದವಿನಲ್ಲಿ 200 ಆಶಕ್ತ ಕುಟುಂಬಗಳಿಗೆ ಮೂಡಪಡುಕೋಡಿ ಹಾಗೂ ಇರ್ವತ್ತೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ,ತಾಲೂಕು ಪಂಚಾಯತ್ ಸದಸ್ಯ ರಮೇಶ್ ಕುಡಮೇರ್, ಇರ್ವತ್ತೂರು ಪಂಚಾಯತ್ ಅಧ್ಯಕ್ಷೆ ಸುಜಾತಪ್ರಕಾಶ್ ಕಿಟ್ ವಿತರಿಸಿದರು.
ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್,ಸದಸ್ಯ ರಾದ ದಯಾನಂದ್ ಕುಲಾಲ್ , ಹೇಮಾವತಿ ಬಂಗೇರೆಕೆರೆ,ಸುನಂದ ಕೊಮ್ಮಲೆ,ಪಿಲಾತ್ತಬೆಟ್ಟು ಸ. ಸಂಘದ ನಿರ್ದೇಶಕರಾದ ಸುಂದರ್ ನಾಯ್ಕ್ ಜಾರಿಗೆದಡಿ, ದಿನೇಶ್ ಮೂಲ್ಯ ಬಂಗೇರೆಕೆರೆ, ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ರವಿಶಂಕರ್ ಹೊಳ್ಳ ಮಣ್ಣೂರು, ಪ್ರಮುಖರಾದ ದಯಾನಂದ್ ಎಸ್,ಎರ್ಮೆನಾಡು, ಮಿಥುನ್ ಪ್ರಭು ಮಲ್ಯಾರು, ಸತೀಶ್ ಸಪಲ್ಯ ಮುಂಡಬೈಲು, ಮನೋಹರ್ ಸಪಲ್ಯ ಇರ್ವತ್ತೂರು, ದಾಮೋದರ ಮುಂಡಬೈಲು ಮೊದಲಾದವರು ಉಪಸ್ಥಿತರಿದ್ದರು.
ಸಂಗಬೆಟ್ಟು ಮತ್ತು ಕರ್ಪೆ ಗ್ರಾಮದ 44 ಫಲಾನುಭವಿಗಳಿಗೆ ಸಿದ್ಧಕಟ್ಟೆ ಹಾಲಿನ ಸೊಸೈಟಿಯಲ್ಲಿ ವಿತರಿಸಲಾಯಿತು. ನರಿಕೊಂಬು ಗ್ರಾ.ಪಂ ನಲ್ಲಿ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟುವರು ಅರ್ಹರಿಗೆ ವಿತರಿಸಿದರು
