ಬಂಟ್ವಾಳ: ಇಲ್ಲಿನ ಉಪವಿಭಾಗ ವ್ಯಾಪ್ತಿಯ ಬಂಟ್ವಾಳ ಮತ್ತು ಬೆಳ್ತಂಗಡಿ ಎರಡು ತಾಲೂಕಿನ ಸುಮಾರು 300 ರಷ್ಟು ಪೋಲಿಸ್ ಅಧಿಕಾರಿಗಳ ಸಹಿತ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯ ಗುರುವಾರ ನಡೆಯಿತು.

ಕೋವಿಡ್ 19 ನ ಅವಧಿಯಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಪೋಲಿಸರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಎರಡು ತಾಲೂಕಿನ ಪೋಲಿಸ್ ಸಿಬ್ಬಂದಿಗಳನ್ನು ಠಾಣೆಯಲ್ಲಿಯೇ ಸರಕಾರಿ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದರು.
ಬಂಟ್ವಾಳ ಡಿ.ವೈ.ಎಸ್.ಪಿ.ಕಚೇರಿ,ನಗರ ಠಾಣೆ,ಪುಂಜಾಲಕಟ್ಟೆ ಠಾಣೆಯ ಸಿಬ್ಬಂದಿಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಗಳು ತಪಾಸಣೆಗೈದರು.
