ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೂನ್ಯ ದಿ. ಕಾಂತಪ್ಪ ಪೂಜಾರಿಯವರ ಪುತ್ರ ಸೇಸಪ್ಪ ಯಾನೆ ಸುರೇಶ್ ಕೆ. ಪೂಜಾರಿ(54) ಅವರು ಬುಧವಾರ ಮುಂಬಯಿಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಸುರೇಶ್ ಕೆ.ಪೂಜಾರಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಮಾಯಾನಗರಿ ಮುಂಬೈಗೆ ತೆರಳಿ ಅಲ್ಲಿಯೇ ಉದ್ಯಮವನ್ನು ನಡೆಸುತ್ತಿದ್ದು ತನ್ನ ಸಂಸಾರದೊಂದಿಗೆ ಜೀವನ ಸಾಗಿಸುತ್ತಿದ್ದರು. ಇತ್ತೀಚಿಗೆ ಅವರ ಅಣ್ಣನ ಮಕ್ಕಳ ಮದುವೆ ಸಂದರ್ಭದಲ್ಲಿ ತನ್ನ ತಾಯಿ ಮನೆಗೆ ಬಂದು ಕುಟುಂಬದವರೊಂದಿಗೆ ಆತ್ಮಿಯತೆಯಿಂದ ಮಾತಾಡಿ ಮುಂಬೈಗೆ ತೆರಲಿದ್ದರು. ಕೋವಿಡ್ -19 ಕೊರೊನಾ ವೈರಾಸ್ ನಿಂದ ದೇಶವೇ ಲಾಕ್ ಡೌನ್ ಆಗಿ ಅವರು ಮುಂಬೈಯ ಸ್ವಗೃಹದಲ್ಲಿ ಖಿನ್ನತೆಗೊಳಗಾಗಿದ್ದರು ಎಂದು ಅವರ ಕುಟುಂಬದವರು ಅಭಿಪ್ರಾಯ ವ್ಯಕ್ತಪಡಿಸಿದರು. ಮೃತರು ತಾಯಿ , ಪತ್ನಿ ಮಕ್ಕಳು ಮತ್ತು ಸಹೋದರ ಸಹೋದರಿಯರನ್ನು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಅಂತ್ಯೆಕ್ರಿಯಯು ಏ.8ರಂದು ಬುಧವಾರ ಮುಂಬೈಯ ಗೋರೆಗಾಂವ್ ವೆಸ್ಟ್ ನ ರುದ್ರಭೂಮಿಯಲ್ಲಿ ದಫನ ಮಾಡಲಾಯಿತು ಎಂದು ಮೃತರ ಭಾವ ತಿಳಿಸಿದ್ದಾರೆ. ಮೃತರ ಕುಟುಂಬದವರಿಗೆ ಕೊರೊನಾ ವೈರಾಸ್ ನಿಂದ ಲಾಕ್ ಡೌನ್ ಇದ್ದ ಕಾರಣ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯ ವಾಗಲಿಲ್ಲ ಎಂದು ಮೃತರ ತಮ್ಮ ತಾರಾನಾಥ್ ಅಳಲು ವ್ಯಕ್ತಪಡಿಸಿದರು .
