
ಶ್ರೀ ಕ್ಷೇತ್ರ ಇರುವೈಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಡಬಿದ್ರೆಯಿಂದ ಎಂಟು ಕಿ.ಮಿ. ದೂರದಲ್ಲಿರುವ ಇರುವೈಲಿನ ಸುಂದರ ಗಿರಿ ಬಯಲುಗಳ ಪ್ರಕೃತಿ ಮಡಿಲಲ್ಲಿ ಕಾಣಸಿಗುವುದೇ ಇತಿಹಾಸ ಪ್ರಸಿದ್ಧ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನ. ಇಲ್ಲಿಂದ ಅರ್ಧ ಕಿ.ಮಿ.ದೂರದಲ್ಲಿ ಫಲ್ಗುಣಿ ಹೊಳೆಯು ಹರಿಯುತ್ತಿದ್ದು, ಕಾರ್ಕಳ, ಬಂಟ್ವಾಳ, ಮಂಗಳೂರು ಈ ಮೂರು ತಾಲೂಕುಗಳ ಗಡಿ ಪ್ರದೇಶದ ಇರುವೈಲಿಗೆ ಮೂಡಬಿದ್ರೆಯಿಂದ ನೇರ ರಸ್ತೆ ಮತ್ತು ಮಂಗಳೂರಿನಿಂದ ಮಿಜಾರು, ಎಡಪದವು, ಕುಪ್ಪೆಪದವು ಹೀಗೆ ನಾಲ್ಕು ಕಡೆಗಳಿಂದಲೂ ರಸ್ತೆ ಮತ್ತು ವಾಹನ ಸಂಪರ್ಕ ಇರುವುದಲ್ಲದೆ ಫಲವತ್ತಾದ ಕೃಷಿ ಭೂಮಿಯನ್ನು ಆವರಿಸಿಕೊಂಡಿರುವ ಶಾಂತ ವಾತಾವರಣದ ಪ್ರದೇಶವಿದಾಗಿದೆ. ಪವಿತ್ರ ನಂದಿನಿ ನದಿಯ ಉಗಮ ಸ್ಥಾನವು ಇದೇ ಗ್ರಾಮದ ಕನಕಗಿರಿ ಎಂಬ ಪ್ರದೇಶದ ಮಧ್ಯಭಾಗದಿಂದ ಹರಿದುಹೋಗಿರುತ್ತದೆ. ಮೂಡಬಿದ್ರೆಯ ಚೌಟರ ಸೀಮೆಗೆ ಒಳಪಟ್ಟ ಸದ್ರಿ ದೇವಸ್ಥಾನದಲ್ಲಿ ನಾಗಲಯ, ನಾಗ ಬ್ರಹ್ಮಸ್ಥಾನ ಹಾಗೂ ಬಹಳ ವಿಶಿಷ್ಟವಾದ ಮಾಡ್ಲಾಯ ಎಂಬ ಕ್ಷೇತ್ರ ರಕ್ಷಕ ದೈವವು ಹೊಸಮರಾಯ ಎಂಬ ಗ್ರಾಮ ರಕ್ಷಕ ದೈವವು ಇರುವುದು ಹಾಗೂ ಇದಕ್ಕೆ ಸಂಬಂದಪಟ್ಟಂತೆ ಗ್ರಾಮದಲ್ಲಿ ಹದಿನಾರು ಗುತ್ತು ಬಾಳಿಕೆ ಮನೆತನಗಳು ಇರುವುದು.
ಭಕ್ತಾಭೀಷ್ಟ ಫಲಪ್ರದೆಯಾದ ಶ್ರೀ ದೇವಿಗೆ ರಂಗಪೂಜಾ ಆರಾಧನೆ, ಹೂವಿನ ಪೂಜೆ, ಭಜನೆ, ಯಕ್ಷಗಾನ ಇತ್ಯಾದಿ ಸೇವೆಗಳು ವಿಶೇಷ. ಪ್ರತಿ ವರ್ಷ ಫಾಲ್ಗುಣಿ ಪೌರ್ಣಮಿಯಂದು ಧ್ವಜಾರೋಹಣದೊಂದಿಗೆ ಮೊದಲ್ಗೊಂಡು ವಷರ್ಾವಧಿ ವಹೋತ್ಸವ, ರಥೋತ್ಸವವು ಜರುಗುವುದು ಹಾಗೂ ನವರಾತ್ರಿ ಮತ್ತು ಪರ್ವದಿನಗಳಲ್ಲಿ ಉತ್ಸವಗಳು ಅಲ್ಲದೆ ನಿತ್ಯ ನೈಮಿತ್ತಿಕ ತ್ರಿಕಾಲ ಪೂಜೆಗಳು ಜರುಗುವುವು.
ಇತ್ತೀಚೆಗೆ ಕೆಲವು ದಶಕಗಳಿಂದ ದೇವಾಲಯವು ಸರಕಾರದ ಹಿಂದೂ ಧಾಮರ್ಿಕ ಮತ್ತು ಧರ್ಮದಾಯ ದತ್ತಿ ಸಂಸ್ಥೆಗಳು ಇಲಾಖೆಯ ಅಧೀನತೆಯಲ್ಲಿದ್ದು, ಪ್ರಸ್ತುತ ವ್ಯವಸ್ಥಾಪನಾ ಸಮಿತಿ ಅಸ್ಥಿತ್ವದಲ್ಲಿದ್ದು, ಊರ ಪರವೂರ ಭಕ್ತಾಭಿಮಾನಿಗಳು ಹಾಗೂ ಗುತ್ತು ಬಾಳಿಕೆ ಮನೆತನದವರ ಸಹಕಾರದೊಂದಿಗೆ ದೇವಸ್ಥಾನ ಸವರ್ಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ.
ಬಹಳ ಹಳೆಯದಾಗಿರು ಸದ್ರಿ ದೇವಾಲಯವು ತುಂಬಾ ಜೀಣರ್ಾವಸ್ಥೆಯಲ್ಲಿದ್ದು, ಪ್ರಸ್ತುತ ಗರ್ಭಗುಡಿ ತಿರ್ಥಮಂಟಪ ಸುತ್ತುಪೌಳಿ ನವೀಕರಣಗೊಂಡು 2007ರಲ್ಲಿ ಬ್ರಹ್ಮಕಲಶ ನಾಗಮಂಡಲ ವಿಜೃಂಭನೆಯಿಂದ ಜರುಗಿರುತ್ತವೆ.
ಆ ಬಳಿಕ ದೆವಸ್ಥಾನದ ಎದುರಿನ ರಾಜಗೋಪುರವು ನವೀಕರಣಗೊಂಡು 2012ರಲ್ಲಿ ಉದ್ಘಾಟನೆಯಾಗಿರುತ್ತದೆ. ಸದ್ರಿ ದೇವಳದಲ್ಲಿ ಪ್ರತಿ ಶುಕ್ರವಾರ ಸಂಕ್ರಮಣ ವಿಶೇಷ ಉತ್ಸವ ಹಾಗೂ ಮಹೋತ್ಸವ ಸಮಯದಲ್ಲಿ ಅನ್ನದಾನವು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದಲ್ಲಿ ಅನ್ನದಾನದ ವ್ಯವಸ್ಥೆಗಾಗಿ ಸುಸಜ್ಜಿತವಾದ ಅನ್ನಛತ್ರ, ಹೊರಾಂಗಣದ ಅಂಗಣಕ್ಕೆ ಶಾಶ್ವತ ಹಾಸುಕಲ್ಲು ಹಾಕುವುದು. ಹೊರಾಂಗಣಕ್ಕೆ ಶಾಶ್ವತ ಚಪ್ಪರ, ಕಲ್ಯಾಣ ಮಂಟಪವನ್ನು ಮಾಡುವುದೆಂದು ತೀಮರ್ಾನಿಸಲಾಗಿದೆ. ಮುಂದಿನ ಯೋಜನೆಗಳಾಗಿವೆ.


