ಲಕ್ನೋ: ದೇಶದಲ್ಲಿ ಹಿಂದೂಗಳ ಒಗ್ಗಟ್ಟನ್ನ ಒಡೆಯುವ ಕೆಲಸ ನಡೆಯುತ್ತಿದೆ ಹಿಂದೂಗಳು ಒಗ್ಗಟ್ಟಾಬೇಕೆಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್  ಕರೆ ನೀಡಿದ್ದಾರೆ. ವಾರಣಾಸಿಯಲ್ಲಿ ನಡೆದ ಆರೆಸ್ಸೆಸ್ ಕಾಶೀ ಪ್ರಾಂತ ಸಭೆಯಲ್ಲಿ ಕುರಿತು ಮಾತನಾಡುತ್ತಿದ್ದರು.
mhn
ದೇಶದೆಲ್ಲೆಡೆ, ಅದರಲ್ಲೂ ಉತ್ತರಪ್ರದೇಶದಲ್ಲಿ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ. ಕೋಮುಗಲಭೆಯನ್ನ ನಿಯಂತ್ರಿಸುವ ನೆವದಲ್ಲಿ ಹಿಂದೂ ಸಮುದಾಯದವರನ್ನ ಗುರಿ ಮಾಡಿ ದೌರ್ಜನ್ಯ ಎಸಗಲಾಗುತ್ತಿದೆ. ದೇಶಾದ್ಯಂತ ಹಿಂದೂಗಳ ಮೇಲೆಯೇ ಭೇದಭಾವ ತೋರಲಾಗುತ್ತಿದೆ. ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇಂಥ ವಿನಾಶಕಾರಿ ಪ್ರಯತ್ನಗಳಿಗೆ ಅಂತ್ಯ ಒದಗಿಸಬಹುದು ಉತ್ತರಪ್ರದೇಶದಲ್ಲಿರುವ ಎಲ್ಲಾ 80 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕೆಂದು ಜನತೆಗೆ ಕರೆ ನೀಡಿದ್ದಾರೆ.

ಜೈನ ಸಮುದಾಯ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಆದರೆ, “ಅಲ್ಪಸಂಖ್ಯಾತ”ರ ಪಟ್ಟಿಯಲ್ಲಿ ಜೈನರನ್ನೂ ಸೇರಿಸಲಾಗಿದೆ.ಜೈನ ಸಮುದಾಯದವರೂ ಕೂಡ ತಮ್ಮನ್ನ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಇದು, ಹಿಂದೂ ಸಮುದಾಯವನ್ನ ಒಡೆಯುವ ಪ್ರಯತ್ನ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮುಖಂಡರು ಗುಜರಾತ್ ಕೋಮುಗಲಭೆ ವಿಚಾರದಲ್ಲಿ ನರೇಂದ್ರ ಮೋದಿಯನ್ನ ವಿಪರೀತ ಟೀಕಿಸುವ ಮೂಲಕ ಕೇಸರೀ ಕ್ರಾಂತಿಗೆ ಪರೋಕ್ಷ ನೆರವು ಒದಗಿಸುತ್ತಿದ್ದಾರೆ. ಮೋದಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದರೂ ಟೀಕೆ ಸರಿಯಲ್ಲ ಎಂದು ಕರೆ ನೀಡಿದ್ದಾರೆ

By suddi9

Leave a Reply

Your email address will not be published. Required fields are marked *