ವಿದೇಶಿ ಮಾಧ್ಯಮಗಳ ಗಮನ ಸೆಳೆದ ಮೋದಿಯ ‘ಚಾಯ್ ಪೆ ಚಚರ್ಾ’
ಗುಜರಾತ್: ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ ಏನು ಮಾಡಿದರೂ ಸುದ್ದಿಯಾಗುತ್ತದೆ. ಸದ್ಯ ಅವರು ಹಮ್ಮಿಕೊಂಡಿರುವ ‘ಚಾಯ್ ಪೆ ಚಚರ್ಾ’ ಕಾರ್ಯಕ್ರಮ ಕೂಡಾ ದೇಶೀಯವಾಗಿ ಶ್ಲಾಘನೆಗೆ ಒಳಗಾಗಿದ್ದರೆ ವಿದೇಶದಲ್ಲೂ ಈ ಬಗ್ಗೆ ಚಚರ್ೆಗಳು ನಡೆಯುತ್ತಿವೆ. ವಿದೇಶಿ ಮಾಧ್ಯಮಗಳು ಮತ್ತು ರಾಜಕೀಯ ಪಂಡಿತರು ಮೋದಿಯ ಈ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಬುಧವಾರ ರಾತ್ರಿ ವಡೋಧರದ ಟೀ ಸ್ಟಾಲ್ ಒಂದರಲ್ಲಿ ಕುಳಿತು ದೇಶದ ಮುನ್ನೂರು ನಗರಗಳ ಒಂದು ಸಾವಿರ ಟೀ ಸ್ಟಾಲ್ಗಳಲ್ಲಿ ಆಯೋಜಿಸಲಾಗಿದ್ದ ಚಾಯ್ ಪೆ ಚಚರ್ಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಸಾಮಾನ್ಯ ಜನರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಮೋದಿ ಕುಳಿತಿದ್ದ ಟೀಸ್ಟಾಲ್ನಲ್ಲಿ ಬೃಹತ್ ಟಿವಿ ಪರದೆಯನ್ನು ಅಳವಡಿಸಲಾಗಿದ್ದು ಇದರ ಸಂಪರ್ಕವನ್ನು ಒಂದು ಸಾವಿರ ಟೀ ಸ್ಟಾಲ್ಗಳಲ್ಲಿರುವ ಟಿವಿಗಳಿಗೆ ಉಪಗ್ರಹದ ನೆರವಿನಿಂದ ಸಂಪಕರ್ಿಸಲಾಗಿತ್ತು. ಕೈಯಲ್ಲಿ ಚಹಾದ ಕಪ್ ಹಿಡಿದು ಜನರ ಪ್ರಶ್ನೆಗಳಿಗೆ ಮೋದಿ ಉತ್ತರಿಸಿದರು. ಇದೊಂದು ಅತ್ಯಂತ ವಿನೂತನ ಪ್ರಯೋಗವಾಗಿತ್ತು. ದೇಶದಲ್ಲಿ ಸುಮಾರು ತೊಂಬತ್ತು ಶೇಕಡಾ ಜನರು ಚಹಾ ಮಾರಾಟದಂತ ಅನೌಪಚಾರಿಕ ಉದ್ಯೋಗಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರನ್ನು ತಲುಪುವ ನಿಟ್ಟಿನಲ್ಲಿ ಮೋದಿ ಹೆಜ್ಜೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ‘ವಂಶಪಾರಂಪರ್ಯ ಎಂಬುದು ಈಗ ಒಂದು ಸಂಪತ್ತಾಗಿ ಉಳಿದಿಲ್ಲ ಬದಲಿಗೆ ಅದೊಂದು ಜವಾಬ್ದಾರಿಯಾಗಿದೆ’ ಎಂದು ರಾಹುಲ್ ಗಾಂಧಿಯ ಹೆಸರು ಹೇಳದೆ ರಾಜಕೀಯ ತಜ್ಞ ಕ್ರಿಸ್ಟೋಫ್ಜಫ್ರೆಲೊ ಹೇಳಿದ್ದಾರೆ. ಈ ಮಾತುಗಳು ಮೋದಿ ಗೆಲುವಿನ ಹಾದಿಯಲ್ಲಿ ಸರಿಯಾದ ಹೆಜ್ಜೆಗಳನ್ನಿಡುತ್ತಿದ್ದಾರೆ ಎಂಬುದರ ಸೂಚಕವಾಗಿದೆ.

