ಗುರುಪುರ : ಗುರುಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ವಿಸ್ತರಣಾ ಕಾಮಗಾರಿಗೆ ಡಿ. 17ರಂದು ಶಾಸಕ ಡಾ. ಭರತ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಸರ್ಕಾರದ ಯೋಜನೆ ನಬಾರ್ಡ್ 24ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸರ್ಕಾರದ ವತಿಯಿಂದ ತರಗತಿ ಕೊಠಡಿ ಹೆಚ್ಚಿಸಲು 95 ಲಕ್ಷ ರೂ ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಈಗಿರುವ ಕಾಲೇಜು ಕಟ್ಟಡದ ಮೇಲ್ಗಡೆ ಫಿಝಿಕ್ಸ್, ಕೆಮಿಸ್ಟ್ರಿ ಮತ್ತು ಕಂಪ್ಯೂಟರ್ ಸೈನ್ಸ್ ತರಗತಿಗಳ ಸಹಿತ ಒಟ್ಟು ಆರು ತರಗತಿ ಕೊಠಡಿ ಹಾಗೂ ನಾಲ್ಕು ಶೌಚಾಲಯ ನಿರ್ಮಾಣವಾಗಲಿದೆ.

 

gur-dec-17-Dr. bharat shetty-1(college) (3)

 

gur-dec-17-Dr. bharath shetty(college)

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವರು ದೇವರ ಪ್ರಾರ್ಥನೆ ಮಾಡಿದರು. ಶಾಸಕ ಡಾ. ಶೆಟ್ಟಿ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಸಚಿನ್ ಅಡಪ, ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಾಸುದೇವ ಕಾಮತ್, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಬಿಜೆಪಿ ಗುರುಪುರ ವಲಯಾಧ್ಯಕ್ಷ ರಾಜೇಶ್ ಸುವರ್ಣ, ಪಂಚಾಯತ್ ಸದಸ್ಯೆ ಸೇಸಮ್ಮ ಮತ್ತು ಮೊಹಮ್ಮದ್ ಸಾದಿಕ್, ಪ್ರಭಾರ ಪ್ರಾಂಶುಪಾಲೆ ವಯೊಲ್ಲಾ ಸಿಕ್ವೇರ, ಹೈಸ್ಕೂಲ್ ಮುಖ್ಯ ಶಿಕ್ಷಕಿ ರೂಪಾ ಡಿ, ಉಪನ್ಯಾಸಕ ವೃಂದ, ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್, ವಿಷ್ಣು ಕಾಮತ್, ಸೋಮಯ್ಯ, ಶ್ರೀಕರ ಶೆಟ್ಟಿ, ಹರೀಶ್ ಬಳ್ಳಿ, ಜಿ ಕೆ ನರಸಿಂಹ ಪೂಜಾರಿ, ಜಲಜಾ, ನಳಿನಿ ಶೆಟ್ಟಿ, ಅಧಿಕಾರಿ ಸಂಜೀವ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದ

By suddi9

Leave a Reply

Your email address will not be published. Required fields are marked *