ಕೈಕಂಬ: ಜಿಲ್ಲೆಯಾದ್ಯಂತ ನಿಷೇದಾಜ್ಙೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗುರುಪುರ ಕೈಕಂಬ ಪೇಟೆ ಸಂಪೂರ್ಣ ಬಂದ್ ಆಗಿತ್ತು ಅಲ್ಲದೇ ಗುರುಪುರ ಕೈಕಂಬದ ಪೊಳಲಿ ದ್ವಾರ ಹಾಗೂ ಅಡ್ಡೂರು ಬಳಿ ನಾಕಾ ಬಂದಿ ಬಿಗು ಬಂದಬಸ್ತು ಕಾರ್ಯ ಗುರುಪುರ ಕೈಕಂಬ ಪೊಳಲಿ ಬಿಸಿರೋಡು ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರ ಸಂಪೂರ್ಣ ನಿಲುಗಡೆಯಾಗಿತ್ತು.

ಕರಿಯಂಗಳ ಗ್ರಾ.ಪಂ.ಸಮೀಪ ಕಲ್ಲೆಸೆತ
ಈ ಮಧ್ಯೆ ಕೆಲ ಯುವಕರ ತಂಡ ಪೊಳಲಿ ದೇಗುಳದ ಸ್ವಾಗತ ಗೋಪುರದ ಬಳಿ ಇರುವ ಕರಿಯಂಗಳ ಗ್ರಾ. ಪಂ. ಕಾರ್ಯಲಯದ ಸಮೀಪ ಕಲ್ಲೆಸೆದು ಪರಾರಿಯಾದ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಪ್ರಕ್ಷುಭ್ಧ ವಾತವರಣ ಸೃಷ್ಠಿಯಾಗಿತ್ತು ಈ ಮಧ್ಯೆ ಜಿಲ್ಲಾ ಪೋಲೀಸ್ ವತಿಯಿಂದ ಬಿಸಿರೋಡು ಕೈಕಂಬದ ಪೊಳಲಿ ದ್ವಾರದಿಂದ ಗುರುಪುರ ಕೈಕಂಬದ ಪೊಳಲಿ ದ್ವಾರದವರೆಗೆ ವಾಹನ ಸಂಚಾರ ನಿಷೇದಿಸಿ ನಾಕಾ ಬಂದಿ ವಿಧಿಸಲಾಗಿತ್ತು. ಈ ಪರಿಸರದಿಂದ ತುರ್ತಆಗಿ ಆಸ್ಪತ್ರೆಗಳಿಗೆ ವಿಮಾನ ನಿಲ್ದಾಣಕ್ಕೆ ಮದುವೆ ಸಮಾರಂಭಗಳಿಗೆ ತೆರಳ ಬೇಕಾದ ವಧುವರರ ಸಹಿತ ವಾಹನಗಳು ಅರ್ಧದಲ್ಲಿ ಸಿಲುಕಿ ಪರದಾಡಬೇಕಾಯಿತು. ಆನಂತರದಲ್ಲಿ ಈ ಪರಿಸರದಲ್ಲಿ ಯಾವುಧೆ ಅಹಿತಕರ ಘಟನೆ ನಡೆದಿಲ್ಲ .ಈ ನಡುವೆ ಅಡ್ಡೂರು ಸೇತುವೆ ಬಲಿ ಗುರುವಾರ ರಾತ್ರಿ ಮಾರ್ಗಕ್ಕೆ ಅಡ್ಡಲಾಗಿ ಟಯರುಗಳನ್ನು ಇರಿಸಿ ಬೆಂಕಿ ಹಾಕಿದ ಹಚ್ಚಿದ ಅವಶೇಷಗಳು ಕಂಡುಬರುತ್ತಿತ್ತು.
