ಪೊಳಲಿ:ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಲ್ಕುಟ ಕೊಳದ ಬಳಿ ದೋಟ ಕೊರಗಜ್ಜನ ಸನ್ನಿಧಿಯಲ್ಲಿ ಹರಕೆಯ ಕೋಲ ಬಲಿ ಸೇವೆಯು ಡಿ.24ರಂದು ಮಂಗಳವಾರ ರಾತ್ರಿ ನಡೆಯಲಿದೆ.
ಪೊಳಲಿ ಆಧ್ಯಾತ್ಮ ಗುರು ವಿಜಯ ಸುವರ್ಣ ಮಾದುಕೋಡಿ ಇವರ ನೇತೃತ್ವದಲ್ಲಿ ಪೊಳಲಿ ಕ್ಯಾಟರರ್ಸ್ ಮಾಲಕರಾದ ನಾರಾಯಣ ಪೂಜಾರಿಯವರು ಕೊರಗಜ್ಜನಿಗೆ ಹರಕೆಯ ಕೋಲ ಬಲಿ ಸೇವೆ ನೀಡಲಿದ್ದು ಆ ಪ್ರಯುಕ್ತ ರಾತ್ರಿ 8.30ಗೆ ಅನ್ನ ಸಂತರ್ಪಣೆ ನಡೆಯಲಿದೆ. ಎಂದು ಸೇವಾಕರ್ತ ನಾರಾಯಣ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
