ಕುಪ್ಪೆಪದವು: ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನ ಕುಪ್ಪೆಪದವು ಇದರ ಜೀರ್ಣೋದ್ದಾರ ನಡೆಸಬೇಕು ಎಂದು  ತಾಂಬೂಲ ಪ್ರಶ್ನೆ ಯಲ್ಲಿ ಕಂಡುಬಂದಿದಿದೆ.  ದೈವಜ್ಞ, ವಿದ್ವಾನ್ ಶ್ರೀ ಭಾಸ್ಕರ ಭಟ್ ಪಂಜ ಇವರ ನೇತೃತ್ವದಲ್ಲಿ, ಎಡಪದವು ರಾಧಾಕೃಷ್ಣ ತಂತ್ರಿಗಳ ಉಪಸ್ಥಿತಿಯಲ್ಲಿ  ಸೋಮವಾರ ಶ್ರೀಕ್ಷೇತ್ರದಲ್ಲಿ ನಡೆದ ತಾಂಬೂಲ ಪ್ರಶ್ನೆ ಯಲ್ಲಿ, ಪ್ರಸ್ತುತ ದೇವಸ್ಥಾನ  ಶಾಸ್ತ್ರೀಯ ರೀತಿಯಲ್ಲಿ ನಿರ್ಮಿತವಾಗಿಲ್ಲ ಅಲ್ಲದೇ ಗರ್ಭಗುಡಿ ಕೂಡ ದುರ್ಭಲ ವಾಗಿದ್ದು,ಅಷ್ಟಬಂಧ ಕೂಡ ಕ್ಷೀಣಗೊಂಡಿದೆ,  ತೀರ್ಥ ಮಂಟಪ ಸಹಿತ ದೇವಸ್ಥಾನವನ್ನು ಪುನರ್ ನಿರ್ಮಿಸುವಂತೆ ಸೂಚನೆ ಕಂಡುಬಂದಿದೆ, ದೇವಸ್ಥಾನದ ಅಂತರ್ ನೆಲದಲ್ಲಿ ನಾಗ ಸಾನಿಧ್ಯ ವಿದ್ದು, ದೇವಾಲಯದ ಪುನರ್ನಿರ್ಮಾಣದ ಸಂಧರ್ಭದಲ್ಲಿ ನಾಗ ಪ್ರತಿಷ್ಠೆಯೂ ನಡೆಸಬೇಕು ಎಂದು ಸೂಚಿಸಲಾಗಿದೆ, ಇಲ್ಲಿನಕೆಲವು  ನ್ಯೂನ್ಯತೆಗಳಿಂದಾಗಿ ದೇವರು ಅಂತರ್ಮುಖಿಯಾಗಿದ್ದು,  ದೋಷ ಪರಿಹಾರ ಕ್ಕಾಗಿ ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಸೇವೆ ಸಹಿತ ಪ್ರಾಯಶ್ಚಿತ ಪರಿಹಾರಗಳನ್ನು ಮಾಡಬೇಕು ಎಂಬ  ಸೂಚನೆ ಕಂಡುಬಂದಿದೆ .
IMG_20191217_175923_034
ಶಾಸ್ತ್ರೀಯ ರೀತಿಯಲ್ಲಿ ಗರ್ಭಗುಡಿ, ತೀರ್ಥಮಂಟಪಗಳನ್ನು ಪುನರ್ನಿರ್ಮಾಣ ಮಾಡಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಸಬೇಕು ಎಂದು ಸೂಚನೆಯನ್ನು ನೀಡಲಾಗಿದೆ, ಆಡಳಿತ ಟ್ರಸ್ಟ್ ನ ಅಧ್ಯಕ್ಷ  ಪ್ರವೀಣ್ ಕುಮಾರ್ ಅಗರಿ, ಟ್ರಸ್ಟ್ ನ ಕಾರ್ಯದರ್ಶಿ ಉಮೇಶ್ ಅಮೀನ್ ನಾಗಂದಡಿ, ಕೋಶಾಧಿಕಾರಿ ಪುರುಷೋತ್ತಮ್, ಕೆ. ಸದಸ್ಯರುಗಳಾದ  ತುಳಸಿ, ಸಂಜೀವ ಶೆಟ್ಟಿ, ವಸಂತಿ ಅಗರಿ,ವಿಕ್ರಂ ಭಟ್,ಚಂದ್ರಹಾಸ್ ಶೆಟ್ಟಿ,   ರಾಮಣ್ಣ ನಾಯ್ಕ್, ಅರ್ಚಕರಾದ ಸದಾಶಿವ ಕಾರಂತ,  ಶಿವರಾಮ್ ಕಾರಂತ, ಮುಖಂಡರುಗಳು, ಊರ ಪ್ರಮುಖರು, ಭಕ್ತಾದಿಗಳು ಹಾಜರಿದ್ದರು

By suddi9

Leave a Reply

Your email address will not be published. Required fields are marked *