ಕೈಕಂಬ: ಸರಕಾರಿ ಶಾಲೆಗಳ ಬಗ್ಗೆ ಕಾಲಜಿ ವಹಿಸಿ ಶಾಲೆಗಳನ್ನು ಉಳಿಸಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದ.ಕ. ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಅವರು ಕುಳವೂರು ಬೊಳಿಯ ದ. ಕ. ಜಿಲ್ಲಾಪಂಚಾಯತ್ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಷಷ್ಟ್ಯಬ್ದಿ ಮಹೋತ್ಸವ ಹಾಗೂ ಬೊಳಿಯ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.IMG-20191215-WA0001

ಖಾಸಗೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಇಂದು ಸರಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ ಇಂದು ಉನ್ನತ ಮಟ್ಟದ ಹುದ್ದೆಗಳಲ್ಲಿರುವವರು ಸರಕಾರಿ ಶಾಲೆಗಳಲ್ಲಿ ಕಲಿತ ವಿಧ್ಯಾರ್ಥಿಗಳೇ ಆಗಿದ್ದಾರೆ ಸರಕಾರ ಕೂಡ ಸರಕಾರಿ ಶಾಲೆಗಳಲ್ಲಿ ಕಲಿತವರಿಗೆ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಅವಶ್ಯ ವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದೆ ಸಾರ್ವಜನಿಕರು ಹಳೇ ವಿಧ್ಯಾರ್ಥಿಗಳು ತಮ್ಮ ಊರಿನ ಶಾಲೆಯ ಬಗ್ಗೆ ಕಾಳಜಿ ಇಟ್ಟುಕೊಂಡು ಶಾಲೆಗಳನ್ನು ಉಳಿಸಿಕೊಳ್ಳಬೇಕು, ಎಂದು ಅರುವತ್ತು ವರ್ಷಾಚರಣೆಯ ಸಡಗರದಲ್ಲಿರುವ ಶಾಲೆಗೆ ಶುಭ ಹಾರೈಸಿ, ಶಾಲೆಯ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾಪಂಚಾಯತ್ ನಿಂದ ಕೊಳವೆಬಾವಿ ಮಂಜೂರು ಮಾಡುವುದಾಗಿ ಘೋಷಿಸಿದರು.19vpboliya

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಶಾಸಕ ಡಾ|ಭರತ್ ಶೆಟ್ಟಿ ವೈ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಷಷ್ಠ್ಯಬ್ದಿ ಮಹೋತ್ಸವ ಆಚರಿಸುತ್ತಿರುವುದು, ಗ್ರಾಮೀಣ ಭಾಗದ ಜನ ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವುದು ಕಾರಣವಾಗಿದೆ,ನನ್ನ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಅವಶ್ಯ ವಿರುವ ಮೂಲಭೂತ ಸೌಲಭ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಒದಗಿಸಲು ಪ್ರಯತ್ನಿಸಿದ್ದೇನೆ, ಈ ಶಾಲೆಗೆ ಡಿಜಿಟಲ್ ಕಲಿಕೆಯ ವ್ಯವಸ್ಥೆಯನ್ನು ನೀಡುವುದಾಗಿ ಹೇಳಿದರು.

ಷಷ್ಠ್ಯಬ್ದಿ ಉತ್ಸವ ಸಮಿತಿ ಹಾಗೂ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಸಂದೀಪ್ ಆಳ್ವ ಕಂಗಿನಡಿ ಪ್ರಾಸ್ತಾವಿಕ ಭಾಷಣ ಮಾಡಿದರು, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ವಿನ್ ಫ್ರೀಡಾ ವಿಕ್ಟೊರಿಯಾ ಪಿಂಟೋ ಶಾಲಾವರದಿ ವಾಚಿಸಿದರು. ಶಾಲೆಯ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಭಾವಾನಂದ ಶೆಟ್ಟಿ, ಅಪ್ಪಿ ಕೆ ಸುವರ್ಣ ಹಾಗೂ ವಿಠ್ಠಲ ಪೂಜಾರಿ ಕೊಂದರಪ್ಪು ಮತ್ತು ಶಾಲೆಯಲ್ಲಿಸೇವೆ ಸಲ್ಲಿಸಿ ನಿವೃತ್ತರಾಗಿರುವ ಮುಖ್ಯೋಪಾಧ್ಯಾಯರುಗಳು,ವರ್ಗಾವಣೆಗೊಂಡಿರುವ ಶಿಕ್ಷಕರನ್ನುಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ, ಶಿಕ್ಷಕಿಯರನ್ನು, ಅಂಗನವಾಡಿ ಕಾರ್ಯಕರ್ತೆ ಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ದಾನಿಗಳನ್ನು ಶಾಲೆಯ ಚಟುವಟಿಕೆಗಳಿಗೆ ನಿರಂತರವಾಗಿ ಸಹಕಾರ ನೀಡಿದ ವರನ್ನು, ಹಳೇ ವಿದ್ಯಾರ್ಥಿಗಳನ್ನು, ಶಾಲಾ ಸಿಬಂದಿಗಳನ್ನು, ಷಷ್ಠಬ್ದಿ ಉತ್ಸವಕ್ಕೆ ಸಹಕಾರ ನೀಡಿದ ವಿದ್ಯಾಭಿಮಾನಿಗಳನ್ನು ವೇದಿಕೆಯಲ್ಲಿ ಶಾಲು ಹೊದೆಸಿ ಗೌರವಿಸಲಾಯಿತು.
ಮಾಜಿ ಸಚಿವ ಕೃಷ್ಣ. ಜೆ. ಪಾಲೆಮಾರ್, ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಮುತ್ತೂರು ಗ್ರಾ. ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಪಂ. ಸದಸ್ಯರುಗಳಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ ಗುಂಡ್ಯ, ಪುಷ್ಪಾನಾಯ್ಕ್,ವಸಂತಿ, ಬೊಳಿಯ ಮೊಹಿಯುದ್ದೀನ್ ಅಶ್ರಫಿಯಾ ಮದರಸದ ಗುರುಗಳಾದ ಇಬ್ರಾಹಿಂ, ಕಣ್ಣೊರಿ ಕ್ಲಸ್ಟರ್ ನ ಸಿ ಆರ್ ಪಿ ಪುಷ್ಪಾವತಿ, ಹಿರಿಯರಾದ ಮೋಹನ ದಾಸ್ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ನವೀನ್ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ, ವಿದ್ಯಾರ್ಥಿನಾಯಕಿ ಮೋಕ್ಷಿತಾ, ಷಷ್ಠ್ಯಬ್ದಿ ಸಮಿತಿಯ ಮಹಾಬಲ ಸಾಲ್ಯಾನ್, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ವೈ ಹೆಚ್ ಪವಾರ್ ಸ್ವಾಗತಿಸಿದರು, ಶಿಕ್ಷಕ ಶಂಕರ್ ಶೆಟ್ಟಿ ಎಂ ವಿ ಕಾರ್ಯಕ್ರಮ ನಿರೂಪಿಸಿದರು,ಸಹ ಶಿಕ್ಷಕ ನಾಗೇಶ್ ವಂದಿಸಿದರು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿಧ್ಯಾರ್ಥಿಗಳು, ಹಳೇ ವಿಧ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯಮತ್ತು ಚಾಪರ್ಕ ಕಲಾವಿದೆರ್ ಕುಡ್ಲ ಇವರಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು

By suddi9

Leave a Reply

Your email address will not be published. Required fields are marked *