ಕೈಕಂಬ :ಮಹಾನಗರಪಾಲಿಕೆ ಚುನಾವಣೆಯ ಕಾರಣದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಗಮನಹರಿಸಲು ಸ್ವಲ್ಪ ಸಮಸ್ಯೆಯಾಯಿತು ಗ್ರಾಮ ಪಂಚಾಯತ್ ಗಳಿಗೆ ಅನುದಾನ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ದ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು. ಅವರು ಸೋಮವಾರ ಮುತ್ತೂರು ಪಂಚಾಯತ್ ನ ಕುಳವೂರು ಬೊಳಿಯದಲ್ಲಿ ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸರಕಾರ ಅಸ್ತಿತ್ವಕ್ಕೆ ಬಂದು ಕೆಲವೇ ತಿಂಗಳುಗಳಾಗಿದ್ದರೂ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನವನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ಗ್ರಾಮ ಪಂಚಾಯತ್ ಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗುವುದು ಎಂದರು. ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಹೂರು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಂಚಾಯತ್ ಅಧ್ಯಕ್ಷೆ ನಾಗಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು ಪಂ. ಸದಸ್ಯರುಗಳಾದ ಸತೀಶ್ ಬಲ್ಲಾಜೆ, ಪ್ರವೀಣ್ ಆಳ್ವ, ಪುಷ್ಪಾ ನಾಯ್ಕ್, ವಸಂತಿ, ಜೆರಾಲ್ಡ್ ಪಿಂಟೋ,ಮಂಗಳೂರು ಮಹಾನಗರಪಾಲಿಕೆ ಸದಸ್ಯ ಕಿರಣ್ ಕುಮಾರ್, ರುದ್ರಭೂಮಿ ಸಮಿತಿಯ ಅಧ್ಯಕ್ಷ ಪ್ರದೀಪ್ ಕೋಟ್ಯಾನ್, ಗುತ್ತಿಗೆದಾರ ರಂಜನ್ ಕುಮಾರ್ ಅರಳ ಉಪಸ್ಥಿತರಿದ್ದರು. ಮಹಾಬಲ ಸಾಲ್ಯಾನ್ ಸ್ವಾಗತಿಸಿ ಸತೀಶ್ ಬಳ್ಳಾಜೆ ನಿರೂಪಿಸಿ ವಂದಿಸಿದರು.
